ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ :ರಾಜ್ಯಗಳಿಗೆ ಶಾಲೆ ಆರಂಭಿಸುವ ಹೊಣೆ..! ಪೋಷಕರ ಒಪ್ಪಿಗೆ ಪಡೆದು ನಿರ್ಧರಿಸಿ ಎಂದ ಕೇಂದ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಾಲೆಗಳ ಆರಂಭದ ಕುರಿತು ಗುರುವಾರ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆ ಆರಂಭಿಸುವ ನಿರ್ಧಾರವನ್ನು ಅದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.
ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸುವ ಕುರಿತು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ತೆಗೆದುಕೊಳ್ಳಬಹುದು. ಆಫ್‌ಲೈನ್‌ ತರಗತಿ ಕುರಿತು ಮಕ್ಕಳ ಪೋಷಕರ ಒಪ್ಪಿಗೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಬಹುದು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ.
ಕೊರೊನಾ ಭೀತಿ ಇದೆ. ಆದರೆ ಮಕ್ಕಳಿಗೆ ಶಿಕ್ಷಣವೂ ಮುಖ್ಯವಾಗುವುದರಿಂದ ಕೋವಿಡ್‌ ಮುಂಜಾಗ್ರತಾ ಕ್ರಮದೊಂದಿಗೆ ಶಾಲೆ ಆರಂಭಿಸಬಹುದು. ಆದರೆ, ಪೋಷಕರ ಅಭಿಪ್ರಾಯವೇ ನಿರ್ಣಾಯಕ. ಆಯಾ ರಾಜ್ಯಗಳ ಕೋವಿಡ್‌ ಪರಿಸ್ಥಿತಿ, ಪೋಷಕರ ಅಭಿಪ್ರಾಯ ಪಡೆದು ರಾಜ್ಯ ಸರ್ಕಾರಗಳು ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಕೇಂದ್ರದ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ ಡಾ. ವಿ. ಕೆ. ಪಾಲ್‌ ಹೇಳಿದ್ದಾರೆ.
ಸಂಗೀತ, ಆಟೋಟ, ಕ್ರೀಡೆ ಹಾಗೂ ಕಲೆ ಕುರಿತಾದ ಪ್ರದರ್ಶನ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದು ಸಹ ರಾಜ್ಯಗಳಿಗೆ ಬಿಟ್ಟ ವಿಚಾರ. ಕೋವಿಡ್‌ ಮುಂಜಾಗ್ರತೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.
ಕೊರೊನಾ ದೈನಂದಿನ ಸೋಂಕು ಸತತವಾಗಿ ಇಳಿಕೆಯಾಗುತ್ತಿದೆ. ಜನವರಿ 21 ರಂದು 3.47 ಲಕ್ಷ ಸೋಂಕು ದಾಖಲಾಗಿತ್ತು. ನಂತರ ಪ್ರತಿ ದಿನ ದೈನಂದಿನ ಸೋಂಕಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅಲ್ಲದೆ, ದೇಶದ 16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.100ರಷ್ಟು ಮೊದಲ ಡೋಸ್‌ ನೀಡಲಾಗಿದೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಪ್ರಸ್ತುತ ಡೇಟಾವು ಹಿಂದಿನ ಕೋವಿಡ್ -19 ಉಲ್ಬಣಕ್ಕಿಂತ ಭಿನ್ನವಾಗಿ, ಪ್ರಸ್ತುತ ರೂಪಾಂತರದೊಂದಿಗೆ, ಕೊರೊನಾ ವೈರಸ್ ರೋಗಿಗಳಲ್ಲಿ ತೊಡಕುಗಳು ಅಥವಾ ಸಾವುಗಳ ಹೆಚ್ಚಿನ ಸಾಧ್ಯತೆಗಳೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸೂಚಿಸುತ್ತದೆ ಎಂದು ಅದು ಗಮನಿಸಿದೆ.
ಹಿಂದಿನ ಅಲೆಗಳಿಗೆ ಹೋಲಿಸಿದರೆ ಸರಾಸರಿ 44 ವರ್ಷ ವಯಸ್ಸಿನ ಜನಸಂಖ್ಯೆಯು ಈ ಕೋವಿಡ್ ಅಲೆಯಲ್ಲಿ ಹೆಚ್ಚು ಸೋಂಕಿಗೆ ಒಳಗಾಗಿದೆ ಎಂದು ಸರ್ಕಾರ ಹೇಳಿದೆ ಮತ್ತು ಕಳೆದ ಬಾರಿ ಸರಾಸರಿ 55 ವರ್ಷಗಳಾಗಿತ್ತು ಎಂದು ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement