ಮದುವೆ ಕಾರ್ಯಕ್ರಮದಲ್ಲಿ ಮಾಲೆ ಹಾಕುವಾಗ ವರನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿ ಮಂಟಪದಿಂದ ಹೊರಟು ಹೋದ ವಧು..| ವೀಕ್ಷಿಸಿ

ಮದುವೆಯ ಸೀಸನ್‌ ಈಗ ಜೋರಾಗಿದೆ. ಎಲ್ಲಾ ರೀತಿಯ ತಮಾಷೆಯ ಮತ್ತು ಆಸಕ್ತಿದಾಯಕ ವಿವಾಹದ ವೀಡಿಯೊಗಳು ಪ್ರತಿದಿನವೂ ವೈರಲ್ ಆಗುತ್ತವೆ. ಆದರೆ ಒಂದು ಅಸಹಜವಾದ ವೀಡಿಯೊದಲ್ಲಿ, ಮದುವೆಯಲ್ಲಿ ವಧು-ವರರು ಪರಸ್ಪರ ಮಾಲೆ ಹಾಕುವ ಸಮಯದಲ್ಲಿ ವೇದಿಕೆಯ ಮೇಲೆ ವಧುವು ವರನಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ…!

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಮದುವೆಯಲ್ಲಿ ಪಾಲ್ಗೊಳ್ಳಲು ನೂರಾರು ಅತಿಥಿಗಳು ಆಗಮಿಸಿದ್ದರು.
ಮದುವೆಯ ವೇದಿಕೆಯಲ್ಲಿ ವಧು-ವರರು ತಮ್ಮ ಕೈಯಲ್ಲಿ ಹೂಮಾಲೆಯೊಂದಿಗೆ ನಿಂತಿರುವುದನ್ನು ವೀಡಿಯೊ ತೋರಿಸುತ್ತದೆ. ವರನು ವಧುವಿನ ಕೊರಳಿಗೆ ಹಾರವನ್ನು ಹಾಕಿದಾಗ, ವಧುವು ವರನಿಗೆ ಕಪಾಳ ಮೋಕ್ಷ ಮಾಡುತ್ತಾಳೆ. ಒಮ್ಮೆ ಅಲ್ಲ, ಎರಡು ಬಾರಿ…! ನಂತರ ಮದು ಮಗಳು ವೇದಿಕೆಯಿಂದ ಹೊರ ನಡೆಯುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಅತಿಥಿಗಳು ಆಘಾತಕ್ಕೊಳಗಾಗಿದ್ದರು. ವೀಡಿಯೊ ಪ್ರಕಾರ, ಅವಳು ವರನನ್ನು ಇಷ್ಟಪಡಲಿಲ್ಲ, ಆದಾಗ್ಯೂ, ನಿಖರವಾದ ಕಾರಣ ತಿಳಿದಿಲ್ಲ.

ಟೈಮ್ಸ್ ನೌ ವರದಿಯ ಪ್ರಕಾರ, ವಧುವನ್ನು ರವಿಕಾಂತ್ ಅಹಿರ್ವಾರ್ ಅವರನ್ನು ಮದುವೆಯಾಗಲಿರುವ ರೀನಾ ಎಂದು ನಂತರ ಗುರುತಿಸಲಾಯಿತು. ಕೊನೆಗೆ ಸ್ಥಳೀಯ ಪೊಲೀಸರು ಹಾಗೂ ಕುಟುಂಬಸ್ಥರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದ ನಂತರ ಸ್ವಲ್ಪ ಸಮಯದ ನಂತರ ಮದುವೆ ನೆರವೇರಿತು ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೆಲವರು ಖುಷಿಪಟ್ಟರೆ, ಬಹುತೇಕರು ವಧುವು ವರನಿಗೆ ಕಪಾಳಮೋಕ್ಷ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಮದುಮಗಳದ್ದು ಸಂಪೂರ್ಣವಾಗಿ ತಪ್ಪು …. ಅವಳನ್ನು ಬಲವಂತವಾಗಿ ಮದುವೆ ಮಾಡಿದ್ದರೆ ಅವಳು ತನ್ನ ಹೆತ್ತವರಿಗೆ ಕಪಾಳಮೋಕ್ಷ ಮಾಡಬೇಕಿತ್ತು .. ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement