ಬೆಂಗಳೂರು ರೈಲು ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ: ಈ ವರ್ಷ ಇದು 2ನೇ ಪ್ರಕರಣ

ಬೆಂಗಳೂರು: ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಸೋಮವಾರ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಈ ವರ್ಷ ಬೆಂಗಳೂರು ರೈಲು ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಶವ ಪತ್ತೆಯಾಗಿರುವ ಎರಡನೇ ಘಟನೆ ಇದಾಗಿದೆ.
ಸೋಮವಾರ ಬೆಳಗ್ಗೆ 10ರಿಂದ 11ರ ನಡುವೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಡ್ರಮ್ ಪತ್ತೆಯಾಗಿದ್ದು, ಅದನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಮಹಿಳೆಯು ಸುಮಾರು 31 ರಿಂದ 35 ವರ್ಷ ವಯಸ್ಸಿನವರೆಂದು ನಂಬಲಾಗಿದೆ, ಇನ್ನೂ ಮಹಿಳೆಯ ಗುರುತು ಪತ್ತೆಯಾಗಿಲ್ಲ.
ಸೋಮವಾರ ಮೂವರು ವ್ಯಕ್ತಿಗಳು ಆಟೋರಿಕ್ಷಾದ ಮೂಲಕ ಡ್ರಮ್ ಅನ್ನು ಸಾಗಿಸಿ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ಎಸೆದಿರುವುದು ತನಿಖೆಯ ವೇಳೆ ಪೊಲೀಸರಿಗೆ ಕಂಡುಬಂದಿದೆ. ಮೃತದೇಹವನ್ನು ಮಚ್ಲಿಪಟ್ಟಣದಿಂದ ರೈಲಿನಲ್ಲಿ ಸಾಗಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಮಚ್ಲಿಪಟ್ಟಣಕ್ಕೆ ತಂಡವನ್ನು ಕಳುಹಿಸಲಾಗಿದೆ ಆದರೆ ಮೃತದೇಹವನ್ನು ಗುರುತಿಸಲು ಸಾಧ್ಯವಾಗಲಿಲ್ಲ” ಎಂದು ರೈಲ್ವೇ ಪೊಲೀಸ್ ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ತಿಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಜನವರಿ 4 ರಂದು ಯಶವಂತಪುರ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿ ಸ್ವಚ್ಛಮಾಡುವಾಗ 20ರ ಆಸುಪಾಸಿನ ಮಹಿಳೆಯ ಕೊಳೆತ ಶವ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಪತ್ತೆಯಾಗಿತ್ತು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement