ಭಾರತದ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ…!

ಭಾರತದಲ್ಲಿ ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಎಂಬುದು ಗೊತ್ತಿದೆ. ಶನಿ ಶಿಂಗ್ಣಾಪುರ, ಶಬರಿಮಲೆ ಮೊದಲಾದ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಇರುವುದು ದೇಶಾದ್ಯಂತ ಚರ್ಚೆಯ ವಿಷಯವಾಗಿತ್ತು. ಆದರೆ ಭಾರತದ ಕೆಲವು ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬುದು ಹಲವರಿಗೆ ಗೊತ್ತಿಲ್ಲದ ಸಂಗತಿಯಾಗಿದೆ. ಈ ದೇವಾಲಯಗಳಿಗೆ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಅವಕಾಶ. ಇದರ ಹಿಂದಿರುವ ಕಾರಣಗಳು ಬಹಳ ಕುತೂಹಲಕಾರಿಯಾಗಿದೆ.
ಅಟ್ಟುಕಲ್ ಭಗವತಿ ದೇವಸ್ಥಾನ…
ಕೇರಳದಲ್ಲಿರುವ ಅಟ್ಟುಕಲ್ ಭಗವತಿ ದೇವಾಲಯವು ಮಹಿಳೆಯರಿಗೆ ಮಾತ್ರ ಪ್ರವೇಶ ಇರುವ ಒಂದು ದೇವಾಲಯವಾಗಿದೆ. ಪೊಂಗಲ ಹಬ್ಬದ ವೇಳೆ ಲಕ್ಷಾಂತರ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಕೂಡ ಮಾಡಿದೆ. ಈ ಹಬ್ಬದ ವೇಳೆ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಾಗಿ ಮಹಿಳೆಯರ ಅತಿ ದೊಡ್ಡ ಸೇರುವಿಕೆ ಎಂದು ಪರಿಗಣಿಸಲಾಗಿದೆ. ಪೊಂಗಲವು 10 ದಿನಗಳ ಹಬ್ಬವಾಗಿದ್ದು, ಇದು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಬರುತ್ತದೆ ಮತ್ತು ಮಹಿಳೆಯರು ದೇವಿಗೆ (ದೇವಿ) ಬಳೆಗಳನ್ನು ಅರ್ಪಿಸುತ್ತಾರೆ.

ಚಕ್ಕುಲತುಕಾವು ದೇವಸ್ಥಾನ…
ಚಕ್ಕುಲತುಕಾವು ದೇವಾಲಯ ಇದು ಭಗವತಿ ದೇವಿಗೆ ಅರ್ಪಿತವಾದ ಕೇರಳದ ಮತ್ತೊಂದು ದೇವಾಲಯವಾಗಿದೆ. ಇದು ‘ನಾರಿ ಪೂಜೆ’ ಎಂಬ ವಿಶಿಷ್ಟ ವಾರ್ಷಿಕ ಆಚರಣೆಗಳನ್ನು ಅನುಸರಿಸುತ್ತದೆ. ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಧನು ಎಂದು ಕರೆಯಲ್ಪಡುವ ದಿನದಂದು, ಪುರುಷ ಅರ್ಚಕರು 10 ದಿನಗಳ ಕಾಲ ಉಪವಾಸ ಮಾಡಿದ ಮಹಿಳಾ ಭಕ್ತರ ಪಾದಗಳನ್ನು ತೊಳೆಯುತ್ತಾರೆ.
ಬ್ರಹ್ಮ ದೇವಾಲಯ
ರಾಜಸ್ಥಾನದ ಪುಷ್ಕರದ ಬ್ರಹ್ಮ ದೇವಾಲಯವು ಬ್ರಹ್ಮನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ವಿವಾಹಿತ ಪುರುಷರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ, ವರ್ಷಕ್ಕೊಮ್ಮೆ ಅಂದರೆ ಹಿಂದೂ ಚಂದ್ರ ಮಾಸದ ಕಾರ್ತಿಕ ಮಾಸದ ಕಾರ್ತಿಕ ಪೂರ್ಣಿಮೆಯ ಸಮಯದಲ್ಲಿ ಬ್ರಹ್ಮನ ಗೌರವಾರ್ಥವಾಗಿ ಧಾರ್ಮಿಕ ಉತ್ಸವವನ್ನು ನಡೆಸಲಾಗುತ್ತದೆ. ಈ ದೇವಾಲಯವು 14 ನೇ ಶತಮಾನಕ್ಕಿಂತ ಹಿಂದಿನದು.
ಪುರುಷರಿಗೆ ದೇವಾಲಯದಲ್ಲಿ ಪ್ರವೇಶ ನಿರಾಕರಿಸಲು ಕಾರಣವೆಂದರೆ, ದಂತಕಥೆಗಳ ಪ್ರಕಾರ, ಬ್ರಹ್ಮನು ಪುಷ್ಕರ್ ಸರೋವರದಲ್ಲಿ ಯಜ್ಞವನ್ನು ಮಾಡಿದ್ದನು. ಅದನ್ನು ಆತ ತನ್ನ ಪತ್ನಿ ದೇವಿ ಸರಸ್ವತಿಯೊಂದಿಗೆ ಸೇರಿ ಯಜ್ಞ ಮಾಡಬೇಕಾಗಿತ್ತು. ಸರಸ್ವತಿ ದೇವಿಯು ಈ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರಿಂದ ಬ್ರಹ್ಮ ದೇವ ಗಾಯತ್ರಿ ದೇವಿಯನ್ನು ವಿವಾಹವಾಗಿ ಯಜ್ಞದ ಆಚರಣೆಗಳನ್ನು ಪೋರ್ಣಗೊಳಿಸಿದ. ಆದರೆ ಇದರಿಂದ ಅಸಮಾಧಾನಗೊಂಡ ಸರಸ್ವತಿ ದೇವಿ ವಿವಾಹಿತ ಪುರುಷ ದೇವಾಲಯದೊಳಗೆ ಪ್ರವೇಶಿಸಬಾರದು. ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗಲಿದೆ ಎಂದು ಸರಸ್ವತಿ ದೇವಿ ಶಾಪಕೊಟ್ಟಳು. ಈ ಕಾರಣದಿಂದ ಅಲ್ಲಿ ವಿವಾವಾದ ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬುದು ಪ್ರತೀತಿ.

ಪ್ರಮುಖ ಸುದ್ದಿ :-   ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳು ಮಾರಾಟ ; ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಎಲ್‌ ಐಸಿ ; 24 ತಾಸಿನಲ್ಲಿ ಮಾಡಿದ ಪಾಲಿಸಿಗಳು ಎಷ್ಟೆಂದರೆ..

ಮಾತಾ ದೇವಾಲಯ..
ಬಿಹಾರದ ಮುಜಫರ್‌ಪುರದಲ್ಲಿರುವ ಮಾತಾ ದೇವಾಲಯದಲ್ಲಿ ಪುರುಷರಿಗೆ ನಿಷೇಧವಿದೆ, ಏಕೆಂದರೆ ದೇವಾಲಯದ ಆಡಳಿತವು ‘ಋತುಚಕ್ರ’ದ ಸಮಯದಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ನೀಡುತ್ತದೆ. ಇಲ್ಲಿ, ನಿಯಮಗಳನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಎಂದರೆ ಆ ಸಮಯದಲ್ಲಿ ಪುರುಷ ಅರ್ಚಕರಿಗೂ ದೇವಾಲಯದ ಆವರಣಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಆಗ ದೇವಾಲಯವು ‘ಮಹಿಳೆಯರಿಗೆ ಮಾತ್ರ’ ಸೀಮಿತವಾಗುತ್ತದೆ.
ಕಾಮಾಖ್ಯ ದೇವಾಲಯ…
ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಕಾಮಾಖ್ಯ ದೇವಾಲಯ ಅಸ್ಸಾಂನ ಗುವಾಹತಿಯಲ್ಲಿರುವ ನೀಲಾಚಲ ಬೆಟ್ಟದ ಮೇಲೆ ಇದೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಕಾಮಾಖ್ಯ ದೇವಿಗಾಗಿ ಅಂಬುಬಾಚಿ ಮೇಳ ನಡೆಯುತ್ತದೆ. ಈ ಸಮಯದಲ್ಲಿ ದೇವಾಲಯವು ಮೂರು ದಿನಗಳ ಕಾಲ ಮುಚ್ಚಲ್ಪಡುತ್ತದೆ. ಆ ಅವಧಿಯಲ್ಲಿ ಪುರುಷರಿಗೆ ಪ್ರವೇಶ ಇರುವುದಿಲ್ಲ.
ಅಮ್ಮನ್ ದೇವಸ್ಥಾನ
ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಸ್ಥಾನದ ಗರ್ಭಗುಡಿಯಲ್ಲಿ ಮಾ ಭಗವತಿ ದುರ್ಗೆ ಇದ್ದಾರೆ. ಇಲ್ಲಿ ಸನ್ಯಾಸಿಗಳಿಗೆ (ಬ್ರಹ್ಮಚಾರಿ ಪುರುಷರು) ಮಾತ್ರ ದೇವಾಲಯದ ದ್ವಾರದ ವರೆಗೆ ಪ್ರವೇಶಿಸಲು ಅವಕಾಶವಿದೆ, ಆದರೆ ವಿವಾಹಿತ ಪುರುಷರು ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ಸ್ಥಳವು ತಾಯಿ ಪಾರ್ವತಿಯು ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ತಪಸ್ಸು ಮಾಡಿದ ಸ್ಥಳ, ದೇವಾಲಯವನ್ನು ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.. ಕನ್ಯಾಕುಮಾರಿಯ ಈ ದೇವಸ್ಥಾನದಲ್ಲಿ, ಕನ್ಯೆಯಾದ ತಾಇ ಭಗವತಿ ದುರ್ಗೆಯನ್ನು ಮಹಿಳೆಯರು ಮಾತ್ರ ಪೂಜಿಸುತ್ತಾರೆ.
ಸಂತೋಷಿ ಮಾತಾ ದೇವಾಲಯ:
ಜೋಧಪುರ ನಗರದಲ್ಲಿ ಪುರುಷರಿಗೆ ಒಳಗೆ ಪ್ರವೇಶವಿಲ್ಲದಿರುವ ಸಂತೋಷಿ ಮಾತಾ ದೇವಾಲಯವಿದೆ. ಶುಕ್ರವಾರ ತಾಯಿ ಸಂತೋಷಿಗೆ ಮೀಸಲಾದ ದಿನ. ಆದ್ದರಿಂದ, ಈ ದಿನದಂದು, ಮಹಿಳೆಯರು ಶಾಂತಿ ಮತ್ತು ಸಮಾಧಾನಕ್ಕಾಗಿ ದೇವಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಮಹಿಳೆಯರು ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಿಸುತ್ತಾರೆ, ಈ ಸಮಯದಲ್ಲಿ, ಪುರುಷರಿಗೆ ಗರ್ಭಗುಡಿಯೊಳಗೆ ಪ್ರವೇಶವಿಲ್ಲ

ಪ್ರಮುಖ ಸುದ್ದಿ :-   ಬಹುಭಾಷಾ ನಟ ಮುಕುಲ್‌ ದೇವ ನಿಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement