ಉತ್ತರ ಪ್ರದೇಶ: ಉರ್ದು ಭಾಷೆ ಮಾತನಾಡಲು ವಿಫಲವಾದ ನಂತರ ವರನ ಧರ್ಮದ ಬಣ್ಣ ಬಯಲು..!

ಮಾಹಾರಾಜಗಂಜ್‌ (ಉತ್ತರ ಪ್ರದೇಶ): ವರನ ಒಂದು ಸಣ್ಣ ತಪ್ಪು ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಕೊಲ್ಹುಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಾಹದ ಸಮಯದಲ್ಲಿ ಆತನ ವಾಸ್ತವವನ್ನು ಬಹಿರಂಗಪಡಿಸಿತು. ಹೀಗಾಗಿ ಮದುವೆ ಕಾರ್ಯಕ್ರಮ ಪೊಲೀಸ್‌ ಠಾಣೆ ಮೆಟ್ಟಿಲೇರುವಂತಾಯಿತು.
ವರ ಮುಸ್ಲಿಂ ಪುರುಷನಂತೆ ನಟಿಸುತ್ತಿದ್ದ. ಇದೊಂದು ಲವ್‌ ಮ್ಯಾರೇಜ್‌ ಆಗಿತ್ತು. ಆರೋಪಿ ತನ್ನ ಧರ್ಮವನ್ನು ಹುಡುಗಿಯ ಕುಟುಂಬದಿಂದ ಮರೆಮಾಚಿ ಮುಸ್ಲಿಂ ಹುಡುಗಿಯನ್ನು ಮದುವೆಯಾಗುತ್ತಿದ್ದ. ಆದರೆ ಮದುವೆಯ ಸಮಯದಲ್ಲಿ ವರನಿಗೆ ಕೆಲವು ಉರ್ದು ಪದಗಳನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗಲಿಲ್ಲ. ಇದರ ನಂತರ ಆತನ ಗುರುತು ಬಹಿರಂಗಗೊಂಡು ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಆರೋಪಿ ವರನು ತನ್ನ ಧರ್ಮವನ್ನು ಮರೆಮಾಚುತ್ತಿದ್ದನು ಮತ್ತು ಉರ್ದು ಪದಗಳನ್ನು ಸರಿಯಾಗಿ ಉಚ್ಚರಿಸಲು ಅವನು ವಿಫಲವಾದದ್ದು ಮದುವೆ ಸಮಾರಂಭದಲ್ಲಿ ಹಾಜರಿದ್ದ ಜನರಿಗೆ ಅನುಮಾನ ಬರುವಂತಾಯಿತು. ಪರಾರಿಯಾಗಲು ಯತ್ನಿಸುತ್ತಿದ್ದಾಗ ವಧುವಿನ ಕುಟುಂಬ ಮತ್ತು ಗ್ರಾಮಸ್ಥರು ಆರೋಪಿ ಮತ್ತು ಆತನ ಸ್ನೇಹಿತರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಸಿದ್ಧಾರ್ಥ ನಗರಕ್ಕೆ ಸೇರಿದ ಆರೋಪಿ ಕೊಲ್ಹುಯಿ ಪ್ರದೇಶದ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ. ಅವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಭೇಟಿಯಾದರು. ಹುಡುಗ ಮತ್ತು ಹುಡುಗಿ ಇಬ್ಬರೂ ಪರಸ್ಪರ ಭೇಟಿಯಾಗಲು ಪ್ರಾರಂಭಿಸಿದರು. ಹುಡುಗಿಗೆ ಹುಡುಗನ ಧರ್ಮದ ಬಗ್ಗೆ ತಿಳಿದಿತ್ತು, ಆದರೆ ಅವಳು ತನ್ನ ಕುಟುಂಬ ಸದಸ್ಯರಿಗೆ ಏನನ್ನೂ ಬಹಿರಂಗಪಡಿಸದಿರಲು ನಿರ್ಧರಿಸಿದಳು. ಮುಸ್ಲಿಂ ಪದ್ಧತಿಗಳ ಪ್ರಕಾರ ಹುಡುಗಿ ತನ್ನನ್ನು ಮದುವೆಯಾಗುವಂತೆ ಹುಡುಗನನ್ನು ಮನವೊಲಿಸಿದಳು.
ಲಾಕ್‌ಡೌನ್‌ ಇದ್ದಿದ್ದರಿಂದ ನಿಗದಿತ ದಿನಾಂಕದಂದು, ಯುವಕ ಕೇವಲ ಐದು ಜನರೊಂದಿಗೆ ಮದುವೆಯಾಗಲು ಹುಡುಗಿಯ ಮನೆಗೆ ತಲುಪಿದ. ಮದುವೆಯ ಸಮಯದಲ್ಲಿ, ವರನು ಉರ್ದು ಪದಗಳನ್ನು ಉಚ್ಚರಿಸುವಲ್ಲಿ ಎಡವಿಬಿಟ್ಟ. ಇದರ ನಂತರ, ಹುಡುಗನ ಪ್ಯಾನ್ ಕಾರ್ಡ್ ಪರಿಶೀಲಿಸಿದಾಗ ಅವನು ಬೇರೆ ಧರ್ಮಕ್ಕೆ ಸೇರಿದವನು ಎಂಬುದು ಅವನ ಹೆಸರಿನಿಂದ ತಿಳಿದುಬಂದಿದೆ.
ಹುಡುಗಿಯ ಕುಟುಂಬ ವರನ ಮನೆಗೆ ಹೋಗಲಿಲ್ಲ. ಬದಲಾಗಿ ವಧು-ವರರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಇನ್ ಚಾರ್ಜ್ ದಿಲೀಪ್ ಶುಕ್ಲಾ ತಿಳಿಸಿದ್ದಾರೆ. ಎರಡೂ ಪಕ್ಷಗಳು ಪರಸ್ಪರ ಮಾತುಕತೆ ನಡೆಸುತ್ತಿವೆ. ಬಾಲಕಿಗೆ ಈಗಾಗಲೇ ಆರೋಪಿಗಳ ಧರ್ಮದ ಬಗ್ಗೆ ತಿಳಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement