ಕಾರುಗಳಿಗೆ ಬೆಂಕಿ, ಕಲ್ಲು ತೂರಾಟ, ಮುಖಂಡರ ಬಂಧನ: ಕೋಲ್ಕತ್ತಾದಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ರ್ಯಾಲಿಯಲ್ಲಿ ಹಿಂಸಾಚಾರ

ಕೋಲ್ಕತ್ತಾ: ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಸರ್ಕಾರದ ಭ್ರಷ್ಟಚಾರಗಳ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ರಾಜ್ಯ ಕಾರ್ಯದರ್ಶಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕಾರಣ ಕೋಲ್ಕತ್ತಾ ಮತ್ತು ಬಂಗಾಳದ ಹಲವು ಭಾಗಗಳು ಮಂಗಳವಾರ ರಣರಂಗದ ರೀತಿ ಆದವು. ಘರ್ಷಣೆಯಲ್ಲಿ ಹಲವು ಬಿಜೆಪಿ ನಾಯಕರಿಗೆ ಗಾಯಗಳಾಗಿದ್ದು, ಹಲವು ಪೊಲೀಸ್ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸಂಸದ ಲಾಕೆಟ್ ಚಟರ್ಜಿ, ಹಿರಿಯ ನಾಯಕ ರಾಹುಲ್ ಸಿನ್ಹಾ ಮತ್ತು ಇತರರನ್ನು ಸೆಕ್ರೆಟರಿಯೇಟ್‌ಗೆ ಮೆರವಣಿಗೆ ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಫ್ಯಾಷನ್ ಡಿಸೈನರ್ ಮತ್ತು ಬಿಜೆಪಿಯ ಹಿರಿಯ ನಾಯಕ ಅಗ್ನಿಮಿತ್ರ ಪಾಲ್ ಅವರನ್ನು ಹೌರಾ ಮೈದಾನದಲ್ಲಿ ಪ್ರತಿಭಟನಾ ಸ್ಥಳದಲ್ಲಿ ಬಂಧಿಸಲಾಯಿತು.
ಕೋಲ್ಕತ್ತಾ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ಹಲವು ಕಡೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿದರು.

ಸಂತ್ರಗಚ್ಚಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ನೆರೆಯ ಹೌರಾ, ಕೋಲ್ಕತ್ತಾದ ಲಾಲ್‌ಬಜಾರ್ ಮತ್ತು ಎಂಜಿ ರಸ್ತೆ ಪ್ರದೇಶಗಳಲ್ಲಿ ಇದೇ ರೀತಿಯ ಘರ್ಷಣೆಗಳು ವರದಿಯಾಗಿವೆ, ಅಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಅಗ್ನಿಸ್ಪರ್ಶ ಮತ್ತು ವಿಧ್ವಂಸಕ ಘಟನೆಗಳೂ ವರದಿಯಾಗಿವೆ.ಲಾಲ್‌ಬಜಾರ್‌ನಲ್ಲಿ – ಕೋಲ್ಕತ್ತಾ ಪೊಲೀಸ್‌ನ ಪ್ರಧಾನ ಕಚೇರಿ ಇದೆ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ಮಧ್ಯ ಕೋಲ್ಕತ್ತಾದ ಬುರ್ರಾಬಜಾರ್ ಪ್ರದೇಶದಲ್ಲಿ ಮತ್ತೊಂದು ಪೊಲೀಸ್ ಕಾರಿಗೆ ಬೆಂಕಿ ಹಚ್ಚಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ನಬಣ್ಣ ಕಡೆಗೆ ಹೋಗದಂತೆ ತಡೆದಿದ್ದಕ್ಕೆ ಹೌರಾದಲ್ಲಿ ಧರಣಿ ನಡೆಸಿದರು. “ಈ ನಿರಂಕುಶಾಧಿಕಾರಿ ಮಮತಾ ಬ್ಯಾನರ್ಜಿ ಸರ್ಕಾರವು ವಿರೋಧ ಪಕ್ಷಗಳಿಗೆ ಜಾಗ ನೀಡುವುದರಲ್ಲಿ ನಂಬಿಕೆ ಹೊಂದಿಲ್ಲ” ಎಂದು ಅವರು ತಿಳಿಸಿದರು. ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಅವರಲ್ಲಿ ಕೆಲವರು ಆಡಳಿತಾರೂಢ ಟಿಎಂಸಿಯ ಕೈಗೊಂಬೆಗಳಾಗಿ ಬದಲಾಗಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಒಂದುಕಾಲದಲ್ಲಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ‘ಉತ್ತರ ಕೊರಿಯಾದಂತಹ ಸರ್ವಾಧಿಕಾರ’ವನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಮಮತಾ ಬ್ಯಾನರ್ಜಿ ಅವರಿಗೆ ಅವರ ಜನರ ಬೆಂಬಲವಿಲ್ಲ. ಹಾಗಾಗಿ ಉತ್ತರ ಕೊರಿಯಾದಂತಹ ಸರ್ವಾಧಿಕಾರವನ್ನು ಬಂಗಾಳದಲ್ಲಿ ಜಾರಿ ಮಾಡುತ್ತಿದ್ದಾರೆ.. ಸೋಮವಾರ ಪೋಲೀಸರು ಮಾಡಿದ್ದಕ್ಕೆ ಬೆಲೆ ತೆರಬೇಕಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಲು ಆರಂಭಿಸಿದಾಗ ಹೌರಾ ಸೇತುವೆ ಬಳಿ ರ್ಯಾಲಿಯ ನೇತೃತ್ವ ವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅಲ್ಲಿಂದ ತೆರಳಿದರು. ಆದರೆ ಈ ಜಂಗಲ್ ರಾಜ್ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಾದ್ಯಂತ ಘರ್ಷಣೆಗಳು ಮತ್ತು ಹಿಂಸಾಚಾರದ ಬಗ್ಗೆ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ ಮತ್ತು ಬಿಜೆಪಿಯಿಂದಾಗಿ ರಾಜಧಾನಿ ಕೋಲ್ಕತ್ತಾದಲ್ಲಿ ಸಾಮಾನ್ಯ ಜೀವನವು ಸ್ಥಗಿತಗೊಂಡಿದೆ, ಇದು ಜನಸಾಮಾನ್ಯರಿಗೆ ಭಾರಿ ಅನಾನುಕೂಲತೆ ಉಂಟುಮಾಡಿದೆ. “ಬಿಜೆಪಿ ಕಾರ್ಯಕರ್ತರೋ ಅಥವಾ ಗೂಂಡಾಗಿರಿಯೋ? ಸರ್ಕಾರಿ ಆಸ್ತಿಪಾಸ್ತಿ ಧ್ವಂಸ ಮತ್ತು ಹಾನಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಅವ್ಯವಸ್ಥೆ ಉಂಟು ಮಾಡಿ ಶಾಂತಿ ಕದಡುವ ರಾಜ್ಯಾದ್ಯಂತ ಬಿಜೆಪಿಯ ಇಂದಿನ ಚಟುವಟಿಕೆಗಳು ಇಡೀ ರಾಷ್ಟ್ರಕ್ಕೆ ನಾಚಿಕೆ ತಂದಿದೆ. ಇಂತಹ ಅತಿರೇಕದ ವರ್ತನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಟಿಎಂಸಿ ಟ್ವೀಟ್‌ ಮಾಡಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ತೃಣಮೂಲ ವಕ್ತಾರ ಕುನಾಲ್ ಘೋಷ್ ಅವರು ಪ್ರತಿಭಟನೆಯ ವೇಷದಲ್ಲಿ ಬಿಜೆಪಿ ಗಲಾಟೆಗೆ ಪ್ರಚೋದಿಸುತ್ತಿದೆ ಎಂದು ಆರೋಪಿಸಿದ್ದಾರೆ. “ಈ ಹಬ್ಬದ ಋತುವಿನಲ್ಲಿ ಪಶ್ಚಿಮ ಬಂಗಾಳವನ್ನು ಅಸ್ಥಿರಗೊಳಿಸಲು ಇದು ದೊಡ್ಡ ಆಟದ ಯೋಜನೆಯ ಒಂದು ಭಾಗವಾಗಿದೆ. ಇದು ಪ್ರಜಾಸತ್ತಾತ್ಮಕ ಚಳವಳಿಯಲ್ಲ. ಇದು ಗೂಂಡಾವಾದ ಎಂದು ಅವರು ಆರೋಪಿಸಿದರು.
ಕೋಲ್ಕತ್ತಾ ಪೊಲೀಸ್ ಅಧಿಕಾರಿಯೊಬ್ಬರು, ಹಲವಾರು ಪೋಲೀಸ್ ಸಿಬ್ಬಂದಿ ಗಾಯಗೊಂಡಿದ್ದರೂ ಸಹ ಯಾವುದೇ ಪ್ರತಿಭಟನಾಕಾರರಿಗೆ ಯಾವುದೇ ಗಂಭೀರ ಗಾಯಗಲಾದ ವರದಿಯಾಗಿಲ್ಲ. ಕೋಲ್ಕತ್ತಾ ಪೊಲೀಸ್‌ನ ಇಬ್ಬರು ಪೊಲೀಸ್ ಅಧಿಕಾರಿಗಳು – ದೇಬ್ಜಿತ್ ಚಟರ್ಜಿ ಮತ್ತು ಸರ್ಫರಾಜ್ – ಹಿಂಸಾಚಾರದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಉತ್ತರ ಮತ್ತು ದಕ್ಷಿಣ ಬಂಗಾಳದ ಬೆಂಬಲಿಗರನ್ನು ಅವರ ‘ನಬನ್ನಾ ಒಭಿಜಾನ್’ಗಾಗಿ ಕರೆದೊಯ್ಯಲು ಬಿಜೆಪಿ ಏಳು ರೈಲುಗಳನ್ನು ಕಾಯ್ದಿರಿಸಿದೆ. ನೆರೆಯ ಪ್ರದೇಶಗಳಿಂದ ಕೋಲ್ಕತ್ತಾಗೆ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಕರೆತರಲು ಬಸ್ಸುಗಳನ್ನು ಕಾಯ್ದಿರಿಸಲಾಯಿತು. ಆದಾಗ್ಯೂ, ಕೇಸರಿ ಪಕ್ಷದ ಪ್ರಕಾರ, ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ವಿಶೇಷ ರೈಲುಗಳನ್ನು ಹತ್ತದಂತೆ ತಡೆಯಲಾಯಿತು ಮತ್ತು ಕೋಲ್ಕತ್ತಾಗೆ ತೆರಳುತ್ತಿದ್ದ ಹಲವಾರು ಬಸ್‌ಗಳನ್ನು ಪೊಲೀಸರು ತಡೆದರು.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement