ಸಕಲ ಸರ್ಕಾರಿ ಗೌರವಗಳೊಂದಿಗೆ ಗೊಜನೂರ ಯೋಧನ ಅಂತ್ಯಕ್ರಿಯೆ

posted in: ರಾಜ್ಯ | 0

ಗದಗ: ಛತ್ತೀಸಗಡದ ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ನಕ್ಸಲರ ಗುಂಡಿಗೆ ಮಂಗಳವಾರ ವೀರಮರಣವನ್ನಪ್ಪಿದ್ದ ಯೋಧನ ಪಾರ್ಥಿವ ಶರೀರ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಗ್ರಾಮಕ್ಕೆ ಬುಧವಾರ ತಡರಾತ್ರಿ ಆಗಮಿಸಿತು.

ವೀರಯೋಧ ಲಕ್ಷ್ಮಣ ನಿಂಗಪ್ಪ ಗೌರಣ್ಣವರ ಅವರ ಅಂತ್ಯಕ್ಸರಿಯೆಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.       ಯೋಧ ಲಕ್ಷ್ಮಣ ಗೌರಣ್ಣವರ ಕಳೆದ ೧೨ ವರ್ಷಗಳಿಂದ ಬಿ.ಎಸ್.ಎಫ್. ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಂದೆ ಲಕ್ಷ್ಮಣ, ತಾಯಿ ಚಿನ್ನಮ್ಮ, ಪತ್ನಿ ಶಿಲ್ಪಾ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಪುತ್ರ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಅನಾರೋಗ್ಯದ ಕಾರಣದಿಂದ ತಿಂಗಳ ರಜೆ ಕಾಲ ಕುಟುಂಬದೊಂದಿಗೆ ಕಳೆದ ಯೋಧ ಇದೇ ಜುಲೈ ೮ ರಂದು ಮರಳಿ ಸೇವೆಗೆ ಹಾಜರಾಗಿದ್ದರು. ರಜೆ ವೇಳೆ ಸಹೋರದರಿಬ್ಬರ ಮದುವೆ ಮಾಡುವ ಬಗ್ಗೆ ಕುಟುಂಬದಲ್ಲಿ ಚರ್ಚೆಯಾಗಿತ್ತು. ದೊಡ್ಡ ತಮ್ಮನಿಗೆ ವಧು ನಿಶ್ಚಯವಾಗಿತ್ತು ಕಿರಿಯ ಸಹೋದರನ ಬಗ್ಗೆ ಚರ್ಚೆ ನಡೆದು ಮುಂದಿನ ಕಾರ್ತಿಕದಲ್ಲಿ ಮದುವೆ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು.

ಮೃತ ಯೋಧನ ಮದುವೆಯಾಗಿ ೬ ವರ್ಷವಾಗಿದ್ದು ೫ ಮತ್ತು ೩ ವರ್ಷದ ಗಂಡು ಮಕ್ಕಳು ಮತ್ತು ೭ ತಿಂಗಳ ಮಗಳಿದ್ದಾಳೆ. ಯೋಧನ ಕುಟುಂಬಕ್ಕೆ ಸಣ್ಣ ಮನೆಯೊಂದನ್ನು ಬಿಟ್ಟರೆ ಮತ್ತೇನೂ ಇಲ್ಲ. ಒಬ್ಬ ಸಹೋದರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಇನ್ನೊಬ್ಬ ಸಹೋದರ ಗ್ರಾಮದಲ್ಲಿಯೇ ಕೂಲಿ ಕೆಲಸ ಮಾಡುತ್ತಾನೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

ಶೋಕಸಾಗರದಲ್ಲಿ ಮುಳುಗಿದ ಕುಟುಂಬ:

ಮಂಗಳವಾರ ಬೆಳಿಗ್ಗೆ ಯೋಧ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರಿಗೆ ದಿಗಿಲು ಬಡಿದಂತಾಗಿದೆ. ಇದರಿಂದ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿತ್ತು. ತಂದೆ-ತಾಯಿ, ಪತ್ನಿ, ಸಹೋಧರರ ಆಕ್ರಂಧನ ಮುಗಿಲು ಮುಟ್ಟಿತ್ತು.  ಬುಧವಾರ ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಜನಸಮೂಹ ಸೇರಿತ್ತು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಯೋಧನ ಭಾವಚಿತ್ರ ಹಾಕಿ ಗೌರವ ಸಲ್ಲಿಸಿದ್ದಾರೆ. ತಹಸೀಲ್ದಾರ ಭ್ರಮರಾಂಭಾ ಗುಬ್ಬಿಶೆಟ್ಟಿ ಮತ್ತು ಸಿಪಿಐ ವಿಕಾಸ ಲಮಾಣಿ, ಗಣ್ಯರು, ಹಿರಿಯರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

 

ಬಡತನದ ನಡುವೆಯೂ ಮೂವರು ಮಕ್ಕಳನ್ನು ಕಷ್ಟಪಟ್ಟು ದುಡಿದು ದೊಡ್ಡವರನ್ನಾಗಿಸಿದ್ದೇವೆ. ಹಿರಿಯ ಮಗ ಲಕ್ಷ್ಮಣ ದೇಶ ಕಾಯುವ ಕೆಲಸಕ್ಕೆ ಸೇರಿದ್ದು ನಮಗೆ ಹೆಮ್ಮೆಯಾಗಿತ್ತು. ದೇಶ ಸೇವೆ ಜತೆಗೆ ಕುಟುಂಬಕ್ಕೂ ಆಸರೆಯಾಗಿದ್ದ. ಇದೀಗ ವಯಸ್ಸಾದ ನಮ್ಮನ್ನು, ಸೊಸೆ, ಮೂವರು ಸಣ್ಣ ಕಂದಮ್ಮಗಳು ಮತ್ತು ತಮ್ಮಂದಿರಿಬ್ಬರ ಮದುವೆ ಜವಾಬ್ದಾರಿ ಆತನ ಮೇಲಿತ್ತು. ಕುಟುಂಬಕ್ಕೆ ಕಣ್ಣಾಗಿದ್ದ ಆತನದು ದೊಡ್ಡ ಮನಸ್ಸು-ಗುಣವಿತ್ತು. ಸತತ ಫೋನ್ ಸಂಪರ್ಕದಲ್ಲಿದ್ದ. ಮನೆಯ ಕಳಸ ಕಳಚಿದೆ ನಾವೀಗ ಅನಾಥರಾಗಿದ್ದೇವೆ ಎಂದು ಯೋಧನ ತಂದೆ-ನಿಂಗಪ್ಪ ಹಾಗೂ ತಾಯಿ- ಚಿನ್ನವ್ವ ಗೋಳಾಡಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

ಮಕ್ಕಳ ಮೇಲೆ ಮೇಲೆ ಬಹಳಷ್ಟು ಪ್ರೀತಿ ಇತ್ತು. ಮಂಗಳವಾರ ಬೆಳಿಗ್ಗೆಯಷ್ಟೇ ಪೋನ್ ಮಾಡಿ ಮಕ್ಕಳು ಮತ್ತು ನನ್ನೊಂದಿಗೆ ಹಾಗೂ ಅತ್ತೆ-ಮಾವಂದಿರೊಂದಿಗೆ ಮಾತನಾಡಿದ್ದರು. ಕೆಲ ಹೊತ್ತಿನ ಬಳಿಕ ಕೇಳಿ ಬಂದ ಸುದ್ದಿ ನಂಬಲಾಗುತ್ತಿಲ್ಲ. ಏನೂ ಅರಿಯದ ಮೂವರು ಕಂದಮ್ಮಗಳನ್ನು ಕಟಗೊಂಡ ನಾ ಹೆಂಗ ಬದಕ್ಲೀ ನಾನು ಏನು ಮಾಡ್ಲಿ.. ಅಯ್ಯೋ ದೇವರೆ ನಿನಗೆ ಕರುಣಿ ಇಲ್ಲವೇ ಎಂದು  ಯೋಧನ ಪತ್ನಿ ಶಿಲ್ಪಾ ಗೌರಣ್ಣವರ ಕಣ್ಣೀರಿಟ್ಟರು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement