ಬೆಂಗಳೂರು: ಜಯದೇವ ನಿರ್ದೇಶಕರಾಗಿ ಡಾ.ಸಿ.ಎನ್.ಮಂಜುನಾಥ (Dr C.N. Manjunath) ಅವರು ಇನ್ನೂ 6 ತಿಂಗಳು ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬುಧವಾರ ಜುಲೈ 19ಕ್ಕೆ ಡಾ.ಸಿ.ಎನ್.ಮಂಜುನಾಥ್ ಸೇವಾವಧಿ ಮುಕ್ತಾಯ ಆಗಬೇಕಿತ್ತು. ಆದರೆ ಕಲಬುರಗಿ ಜಯದೇವ ಆಸ್ಪತ್ರೆಯ ಕೆಲಸದ ಜವಾಬ್ದಾರಿ ಇರುವ ಹಿನ್ನೆಲೆಯಲ್ಲಿ ಜನವರಿ ತಿಂಗಳವರೆಗೆ ನಿರ್ದೇಶಕರಾಗಿ ಮುಂದುವರಿಯುವಂತೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 2007ರಿಂದ ಡಾ.ಮಂಜುನಾಥ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷವೇ ಡಾ.ಮಂಜುನಾಥ ಅಧಿಕಾರ ಅವಧಿ ಮುಕ್ತಾಯವಾಗಿತ್ತು. ಆದರೆ ರೋಗಿಗಳು ಮತ್ತು ಸಿಬ್ಬಂದಿ ಒತ್ತಾಯದ ಮೇರೆಗೆ 1 ವರ್ಷ ಮುಂದುವರಿಸಲಾಗಿತ್ತು. ಸದ್ಯ ಇನ್ನೂ 6 ತಿಂಗಳು ನಿರ್ದೇಶಕರಾಗಿ ಮುಂದುವರೆಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ