ಹುಷಾರ್‌..| ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣ ಬಂದ್ರೆ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ ; ಒಂದೇ ಕ್ಲಿಕ್ ನಿಮ್ಮ ಎಲ್ಲ ʼಹಣ ಮಾಯʼ ಮಾಡಬಹುದು..!

ಮದುವೆಯ ಸೀಸನ್ ಆರಂಭವಾಗುತ್ತಿದ್ದಂತೆಯೇ, ಅನೇಕರು ವಾಟ್ಸಾಪ್‌ (WhatsApp) ಮೂಲಕ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದಾರೆ. ಅನುಕೂಲಕರ ಮತ್ತು ವೆಚ್ಚದ ದೃಷ್ಟಿಯಿಂದ ಇದು ಸಾಂಪ್ರದಾಯಿಕ ಕಾರ್ಡ್‌ಗಳಿಗೆ ಪರ್ಯಾಯವಾಗುತ್ತಿದೆ. ಆದಾಗ್ಯೂ, ಈ ವಾಟ್ಸಾಪ್‌ ಪ್ರವೃತ್ತಿಯು ಸೈಬರ್ ವಂಚಕರು ಈಗ ಹೊಸ ರೀತಿಯಲ್ಲಿ ಮೋಸ ಮಾಡಲು ಇದನ್ನು ಬಳಸುತ್ತಿದ್ದಾರೆ. ಫೋನ್‌ನಲ್ಲಿ ಬರುವ ಮದುವೆಯ ಆಮಂತ್ರಣವು ಗಂಭೀರವಾದ ಸೈಬರ್‌ ವಂಚನೆಗೆ ಕಾರಣವಾಗಬಹುದು ಅಥವಾ ಮೊಬೈಲ್‌ ಮತ್ತು ವೈಯಕ್ತಿಕ ಡೇಟಾ ಎರಡನ್ನೂ ಅಪಾಯಕ್ಕೆ ತಳ್ಳಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ವಂಚಕರು ಈಗ ಮೋಸ ಮಾಡುವ ಉದ್ದೇಶದಿಂದ ಎಪಿಕೆ ಫೈಲ್‌ಗಳ ರೂಪದಲ್ಲಿ ವಾಟ್ಸಾಪ್ ಮೂಲಕ ಮದುವೆಯ ಆಮಂತ್ರಣಗಳನ್ನು ಕಳುಹಿಸುತ್ತಿದ್ದಾರೆ ಎಂದು ಹಿಮಾಚಲ ಪ್ರದೇಶ ಹಾಗೂ ರಾಜಸ್ತಾನದ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ. ಜನರ ಖಾತೆಯಿಂದ ಹಣವನ್ನು ಲಪಟಾಯಿಸಲು ವಂಚಕರು ಮೊಬೈಲ್ ಸಾಧನಗಳಿಗೆ ಪ್ರವೇಶ ಪಡೆಯಲು ಮದುವೆಯ ಆಮಂತ್ರಣಗಳನ್ನು ಕಳುಹಿಸುತ್ತಿದ್ದಾರೆ. ಬ್ಯಾಂಕ್ ಗಳು ಕಳುಹಿಸುವ ಒಟಿಪಿಗಳನ್ನು ಇದರಿಂದ ವಂಚಕರು ಪಡೆಯುತ್ತಾರೆ. ಜನರ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಲು ಇದನ್ನು ಸಾಧನವನ್ನು ಬಳಸುತ್ತಾರೆ ಎಂದು  ಅವರು ಎಚ್ಚರಿಸಿದ್ದಾರೆ.

ಈ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದಾಗ, ಅವರ ಫೋನ್‌ಗಳು ಮಾಲ್‌ವೇರ್‌ ಸೋಂಕಿಗೆ ಒಳಗಾಗುತ್ತವೆ, ಸೈಬರ್ ಅಪರಾಧಿಗಳಿಗೆ ಮೋಬೈಲ್‌ಗೆ ಸಂಪೂರ್ಣ ಪ್ರವೇಶಿಸಲು ಅನುಕೂಲವಾಗುತ್ತದೆ. ಒಮ್ಮೆ ಸಕ್ರಿಯಗೊಳಿಸಿದ ನಂತರ, ಮಾಲ್‌ವೇರ್ ವಂಚಕರಿಗೆ ಸಂದೇಶಗಳನ್ನು ಕಳುಹಿಸಲು, ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಹಣದ ವಂಚನೆ ಮಾಡಲು ಅನುಮತಿಸುತ್ತದೆ. ಆದರೆ ಇದ್ಯಾವುದೂ ಫೋನ್‌ ಮಾಲೀಕರಿಗೆ ಗೊತ್ತಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ವಂಚನೆಯು ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶದೊಂದಿಗೆ ಪ್ರಾರಂಭವಾಗುತ್ತದೆ, ಹಾಗೂ ಅದು ಮದುವೆಯ ಆಮಂತ್ರಣ ಎಂದು ಹೇಳಿಕೊಳ್ಳುತ್ತದೆ. ಸಂದೇಶವು ಎಲ್ಲ ಮೆಸೇಜ್‌ ನಂತೆ ಕಾಣುತ್ತಿದ್ದರೂ ಅದು ವಾಸ್ತವವಾಗಿ ಹಾನಿಕಾರಕ ಎಪಿಕೆ (APK) ಫೈಲ್ ಆಗಿರುತ್ತದೆ. ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ಫೈಲ್ ರಹಸ್ಯವಾಗಿ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಎಸ್ಟಾಬ್ಲಿಶ್‌ ಮಾಡುತ್ತದೆ, ನಂತರ ಸೈಬರ್ ವಂಚಕರು ಇದರ ಮೂಲಕ ಸೂಕ್ಷ್ಮ ಡೇಟಾವನ್ನು ಕದಿಯಲು, ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು, ಖಾತೆಯಿಂದ ಹಣ ಎಗರಿಸಲು ಮತ್ತು ಸಾಧನದ ಕಾರ್ಯಗಳನ್ನು ನಿಯಂತ್ರಿಸಲು ಇದು ಅನುವು ಮಾಡಿಕೊಡುತ್ತದೆ.

ಹಿಮಾಚಲ ಪ್ರದೇಶ ಹಾಗೂ ರಾಜಸ್ತಾನ ಪೊಲೀಸರು ಅಪರಿಚಿತ ಸಂಖ್ಯೆಗಳಿಂದ ವಿಶೇಷವಾಗಿ ಬರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದಾರೆ. ಇದು ಎಲ್ಲಿಯೂ ನಡೆಯಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅಪರಿಚಿತ ಮೂಲಗಳಿಂದ ಬಂದ ಫೈಲ್‌ಗಳನ್ನು, ವಿಶೇಷವಾಗಿ ಎಪಿಕೆ (APK) ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ, ಏಕೆಂದರೆ ಇವುಗಳು ಮೊಬೈಲ್‌ ಡಾಟಾಗಳಿಗೆ ಹಾನಿ ಮಾಡಬಹುದಾದ ಅಪ್ಲಿಕೇಶನ್‌ಗಳನ್ನು ಹೊಂದಿರಬಹುದು ಎಂದು ಎಚ್ಚರಿಸಿದ್ದಾರೆ.
ಏನನ್ನಾದರೂ ಡೌನ್‌ಲೋಡ್ ಮಾಡುವ ಮೊದಲು ಕಳುಹಿಸುವವರು ಮತ್ತು ಫೈಲ್ ಎರಡನ್ನೂ ಪರಿಶೀಲಿಸಿ ಎಂದು ಹೇಳಿದ್ದಾರೆ. ಯಾರೇ ಆದರೂ ಸೈಬರ್ ವಂಚನೆಗೆ ಬಲಿಯಾದರೆ, ರಾಷ್ಟ್ರೀಯ ಸಹಾಯವಾಣಿ 1930 ಮೂಲಕ ಅಥವಾ https://cybercrime.gov.in ನಲ್ಲಿ ಅಧಿಕೃತ ಸರ್ಕಾರಿ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ತ್ವರಿತವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಸೈಬರ್ ಕ್ರೈಮ್ ಹೆಚ್ಚುತ್ತಿದೆ, ಸ್ಕ್ಯಾಮರ್‌ಗಳು ತಮ್ಮ ತಂತ್ರಗಳನ್ನು ನಿರಂತರವಾಗಿ ಬದಲಾಯಿಸುತ್ತಿದ್ದಾರೆ. ಮದುವೆಯ ಆಮಂತ್ರಣಗಳ ವಂಚನೆ ಜೊತೆಗೆ, ಸೂಕ್ಷ್ಮ ಹಣಕಾಸಿನ ಮಾಹಿತಿಯನ್ನು ಕದಿಯುವ ವಂಚನೆಯ ಸಾಲದ ಕೊಡುಗೆಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement