ಬೆಂಗಳೂರು: ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಶಿಥಿಲಾವಸ್ಥೆಯ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಬುಧವಾರ ನಡೆದ ಬಗ್ಗೆ ವರದಿಯಾಗಿದೆ.
ಮೃತರನ್ನು ಬಾಲು ಮತ್ತು ರಾಜಮಣಿ ಎಂದು ಹೇಳಲಾಗಿದೆ. ಅಗ್ರೋ ಮೋರ್ ಲಿಮಿಟೆಡ್ ಕಂಪನಿಗೆ ಸೇರಿದ ಹಳೆಯ ಕಾಂಪೌಂಡ್ ಸೋಮವಾರ ಮಧ್ಯಾಹ್ನ ಕುಸಿದಿದ್ದು, ಈ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಗೋಡೆ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ