ರೈತರ ಪ್ರತಿಭಟನೆ:ರಾಜ್ಯಸಭೆಯಲ್ಲಿ ಚರ್ಚೆಗೆ ೫ ತಾಸು ನಿಗದಿ

ನವ ದೆಹಲಿ: ದೇಶದಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆ ಬಗ್ಗೆ ಸಂಬಂಧ ಪಟ್ಟ ಪಕ್ಷಗಳು ಪ್ರಸ್ತಾಪಿಸುವಂತೆ ಮತ್ತು ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಐದು ತಾಸು ಸಮಯಾವಕಾಶ ನೀಡುವುದಕ್ಕೆ ರಾಜ್ಯಸಭೆಯಲ್ಲಿ ಬುಧವಾರ ಸರ್ಕಾರ ಮತ್ತು ವಿರೋಧ ಪಕ್ಷಗಳ ಸದಸ್ಯರು ಸಹಮತಕ್ಕೆ ಬಂದಿದ್ದಾರೆ.

ಆದರೂ, ರೈತರ ಪ್ರತಿಭಟನೆ, ನೂತನ ಕೃಷಿ ಕಾಯ್ದೆ ಬಗ್ಗೆ ಚರ್ಚೆ ಆರಂಭವಾಗುವ ಮುನ್ನ ಸದನದಲ್ಲಿದ್ದ ಹಲವು ಸದಸ್ಯರು ತೀವ್ರ ಗದ್ದಲ ಮಾಡಿದರು. ಕೃಷಿ ಕಾಯ್ದೆಯನ್ನು ವಿರೋಧಿಸಿ ಘೋಷಣೆ ಕೂಗುತ್ತಾ ಆಮ್ ಆದ್ಮಿ ಪಕ್ಷದ ಮೂವರು ಸದಸ್ಯರು ಸದನದ ಬಾವಿಗೆ ಇಳಿದರು.  ಸಭಾಪತಿ ವೆಂಕಯ್ಯ ನಾಯ್ಡು ಮನವಿ ಮಾಡಿದರೂ ಕೇಳಲಿಲ್ಲ. ಅಗ ಸಭಾಪತಿ  ಅವರಿಗೆ ಸದನದಿಂದ ಹೊರಗೆ ನಿಲ್ಲುವಂತೆ ಸೂಚಿಸಿದರು. ಸಂಜಯ್ ಸಿಂಗ್, ಸುಶಿಲ್ ಕುಮಾರ್ ಗುಪ್ತ ಮತ್ತು ಎನ್. ಡಿ. ಗುಪ್ತ ಅವರನ್ನು ಬುಧವಾರದ ಕಲಾಪದ ಉಳಿದ ಸಮಯದಲ್ಲಿ ಸದನದೊಳಗೆ ಬಾರದಂತೆ ಸಭಾಪತಿ ಸೂಚಿಸಿದ್ದಾರೆ.

ಇದಕ್ಕೂ ಮುನ್ನ ಬೆಳಗ್ಗೆಯ ಕಲಾಪದಲ್ಲಿ ಇತರ ಪಕ್ಷಗಳಾದ ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್, ಸಿಪಿಐ, ಡಿಎಂಕೆ ಸದಸ್ಯರು ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ  ಬಿಸಿನೆಸ್ ನೊಟೀಸ್  ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement