
ಜೈಪುರ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ ಅವರು ರಾಜಸ್ಥಾನ ವಿಧಾನಸಭಾ ಸಚಿವಾಲಯದಿಂದ ಮಾಜಿ ಶಾಸಕರ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಧನಕರ 1993 ರಿಂದ 1998 ರವರೆಗೆ ಕಿಶನ್‌ಗಢ ಸ್ಥಾನದಿಂದ ಕಾಂಗ್ರೆಸ್ ಶಾಸಕರಾಗಿದ್ದರು.
ಧನಕರ ಅವರು 2019 ರವರೆಗೆ ಮಾಜಿ ಶಾಸಕರ ಪಿಂಚಣಿಯನ್ನು ಪಡೆಯುತ್ತಿದ್ದರು, ಜುಲೈ 2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡ ನಂತರ ಅದನ್ನು ನಿಲ್ಲಿಸಲಾಯಿತು. ಈಗ, ುಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು ಮತ್ತೊಮ್ಮೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಧಾನಸಭಾ ಸಚಿವಾಲಯವು ಅವರ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸಿದೆ.
“ಜಗದೀಪ ಧನಕರ ಅವರ ಪಿಂಚಣಿ ಅರ್ಜಿಯನ್ನು ವಿಧಾನಸಭೆ ಸಚಿವಾಲಯ ಸ್ವೀಕರಿಸಿದೆ, ಇದು ಪ್ರಕ್ರಿಯೆಯಲ್ಲಿದೆ” ಎಂದು ವಿಧಾನಸಭಾ ಸ್ಪೀಕರ್ ವಾಸುದೇವ ದೇವ್ನಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಧಾನಸಭಾ ಅಧಿಕಾರಿಗಳ ಪ್ರಕಾರ, ಧನಕರ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನಾಂಕದಿಂದ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ. ರಾಜಸ್ಥಾನದಲ್ಲಿ, ಮಾಜಿ ಶಾಸಕರೊಬ್ಬರು ತಿಂಗಳಿಗೆ 35,000 ರೂ. ಪಿಂಚಣಿ ಪಡೆಯುತ್ತಾರೆ, 70 ವರ್ಷ ತುಂಬಿದ ನಂತರ ಶೇ. 20 ರಷ್ಟು ಹೆಚ್ಚಳವಾಗುತ್ತದೆ. ಧನಕರ ಅವರಿಗೆ 75 ವರ್ಷ ವಯಸ್ಸಾಗಿರುವುದರಿಂದ, ಅವರಿಗೆ ತಿಂಗಳಿಗೆ 42,000 ರೂ. ಪಿಂಚಣಿ ದೊರೆಯುತ್ತದೆ.



ನಿಮ್ಮ ಕಾಮೆಂಟ್ ಬರೆಯಿರಿ