ವೇಗದಿಂದ ಬಂದ ಕಾರು ಸ್ಕಿಡ್ ಆಗಿ ಅದೆಷ್ಟು ಬಾರಿ ಪಲ್ಟಿ ಹೊಡೆದಿದೆ | ವೀಕ್ಷಿಸಿ

ಛಿಂದ್ವಾರಾ: ವೇಗವಾಗಿ ಬಂದ ಕಾರೊಂದು ಪಲ್ಟಿ ಹೊಡೆದು, ರಸ್ತೆಯಿಂದ ಸ್ಕಿಡ್ ಆಗಿ ನಂತರ ಆಮೆಯಂತೆ ಅನೇಕ ಬಾರಿ ಪಲ್ಟಿ ಹೊಡೆಯುವ ನಾಟಕೀಯ ದೃಶ್ಯಗಳು ಮಧ್ಯಪ್ರದೇಶದ ಛಿಂದ್‌ವಾರಾ-ನಾಗ್ಪುರ ಹೆದ್ದಾರಿಯಲ್ಲಿ ಕಾಣಿಸಿಕೊಂಡಿವೆ. ಕಾರು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗದ್ದೆಗೆ ಪಲ್ಟಿಯಾಗಿ ಈ ಘಟನೆ ನಡೆದಿದೆ.

ವೇಗವಾಗಿ ಬಂದ ಕಾರು ರಸ್ತೆಯ ಮೇಲೆ ಸಂಗ್ರಹವಾದ ನೀರಿನಿಂದ ಸ್ಕಿಡ್‌ ಆಗಿದೆ. ಕಾರಿಗೆ ವೇಗವಿದ್ದ ಕಾರಣ ರ್ಸತೆ ಮೇಲಿನ ನೀರಿನಿಂದಾಗಿ ನಿಯಂತ್ರಣವನ್ನು ಕಳೆದುಕೊಂಡು ನಂತರ ಹೆದ್ದಾರಿ ಪಕ್ಕದ ಹೊಲದಲ್ಲಿ ಪಲ್ಟಿಯಾಗುವುದನ್ನು ಕಾಣಬಹುದು. ಗದ್ದೆಯಲ್ಲಿ ಮೇಯುತ್ತಿರುವ ಹಸುವಿಗೆ ಇಂಚು ದೂರದಲ್ಲಿ ಕಾರು ನಿಲ್ಲುವ ಮೊದಲು ಅನೇಕ ಬಾರಿ ಪಲ್ಟಿ ಹೊಡೆಯುವುದನ್ನು ಕಾಣಬಹುದು.

ಕಾರು ಪಲ್ಟಿ ಹೊಡೆಯುತ್ತ ಬರುತ್ತಿರುವಾಗ ಮರಕ್ಕೆ ಕಟ್ಟಿರುವಂತೆ ಕಾಣುವ ಹಸು ದೂರ ಸರಿಯುತ್ತಿರುವುದನ್ನು ಕಾಣಬಹುದು. ಯಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆಯೇ ಎಂಬುದು ತಿಳಿದುಬಂದಿಲ್ಲ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   'ಯಾರೂ ಮೋದಿಗೆ ಮತ ಹಾಕಬೇಡಿ' ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement