ಬೆಂಗಳೂರು: ನಟ ಚೇತನ್ ಚಂದ್ರ ಮೇಲೆ ಹಲ್ಲೆ

ಬೆಂಗಳೂರು: ಕನ್ನಡ ನಟ ಚೇತನ್ ಚಂದ್ರ (Chetan Chandra) ಅವರ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಕಾರಿನಲ್ಲಿದ್ದ ಬರುತ್ತಿದ್ದಾಗ ಕಾರನ್ನು ಅಡ್ಡಗಟ್ಟಿ ತನಗೆ ಮೇಲೆ ರಕ್ತ ಬರುವಂತೆ ಥಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಇನ್ಸ್ಟಾಗ್ರಾಮನಲ್ಲಿ ಹೇಳೊಕೊಂಡಿದ್ದಾರೆ. ಅವರು ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟನ ಚೇತನ್‌ ಚಂದ್ರ ಅವರು ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ; ಯಾವ ಜಿಲ್ಲೆಗೆ ಯಾರು ? ಪಟ್ಟಿ ಇಲ್ಲಿದೆ

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement