ತಂಗಿಯ ಶಿರಚ್ಛೇದ ಮಾಡಿದ ತುಂಡರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ…!

ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬಾರಾಬಂಕಿಯಲ್ಲಿ 22 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ, ಆತ ತನ್ನ ಸಹೋದರಿಯ ತುಂಡರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಬಾರಾಬಂಕಿಯ ಫತೇಪುರ್ ಪ್ರದೇಶದ ಮಿಥ್ವಾರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಿಯಾಜ್ (22) ಮತ್ತು ಆತನ ಸಹೋದರಿ ಆಶಿಫಾ (18) ನಡುವೆ ನಡೆದ ಜಗಳದ ನಂತರ ಆತ ತನ್ನ ಸಹೋದರಿಯ ರುಂಡ ಚೆಂಡಾಡಿದ್ದಾನೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅಶುತೋಷ್ ಮಿಶ್ರಾ ಪ್ರಕಾರ, ರಿಯಾಜ್ ತನ್ನ ಸಹೋದರಿಯ ಶಿರಚ್ಛೇದ ಮಾಡಲು ಹರಿತವಾದ ಆಯುಧವನ್ನು ಬಳಸಿದ್ದಾನೆ.
ಆಶಿಫಾ ಇತ್ತೀಚೆಗಷ್ಟೇ ಅದೇ ಗ್ರಾಮದ ನಿವಾಸಿ ಚಾಂದ್ ಬಾಬು ಎಂಬಾತನ ಜತೆ ಪರಾರಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಶಿಫಾಳನ್ನು ಕರೆತಂದಿದ್ದರು ಹಾಗೂ ಚಾಂದ್‌ ಬಾಬುವನ್ನು ಜೈಲಿಗೆ ಕಳುಹಿಸಿದ್ದರು.
ರಿಯಾಜ್ ತನ್ನ ಸಹೋದರಿಯ ಸಂಬಂಧವನ್ನು ವಿರೋಧಿಸುತ್ತಿದ್ದ ಮತ್ತು ಈ ವಿಷಯಕ್ಕಾಗಿ ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆಸಿಫಾ ಚಾಂದ್ ಬಾಬು ಜೊತೆ ಮದುವೆಯಾಗಿ ಜೀವನ ಆರಂಭಿಸಲು ಉತ್ಸುಕಳಾಗಿದ್ದಳು. ಈ ಸಂಬಂಧ ಗುರುವಾರ ಬೆಳಿಗ್ಗೆ ಜಗಳ ನಡೆದಿದೆ. ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧ ಎತ್ತಿಕೊಂಡು ತನ್ನ ತಂಗಿಯ ಶಿರಚ್ಛೇದ ಮಾಡಿದ್ದಾನೆ. ನಂತರ ತಲೆಯನ್ನು ಗೋಣಿಚೀಲದಲ್ಲಿ ಪ್ಯಾಕ್ ಮಾಡಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದಾನೆ” ಎಂದು ಎಎಸ್ಪಿ ಮಿಶ್ರಾ ಹೇಳಿದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಮಹಿಳೆಯ ಶಿರಚ್ಛೇದ ಮಾಡಿದ ಸ್ಥಳಕ್ಕೆ ಪೊಲೀಸ್ ತಂಡವು ತಕ್ಷಣವೇ ತಲುಪಿದೆ. ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ | ವಿಶ್ವದ ಅತಿ ಎತ್ತರದ ರೈಲು ಸೇತುವೆ ಮೇಲೆ ಪ್ರಾಯೋಗಿಕವಾಗಿ ವ್ಯಾಗನ್ ಓಡಿಸಿದ ಭಾರತೀಯ ರೈಲ್ವೆ ; ಲೋಕಾರ್ಪಣೆಗೆ ತಯಾರಿ..?

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement