ಎಲ್‌ಐಸಿ ಮೂಲ ಬಂಡವಾಳ 25,000 ಸಾವಿರ ಕೋಟಿ ರೂ.ಗೆ ಹೆಚ್ಚಿಸಲು ನಿರ್ಧಾರ

ನವ ದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಮೂಲ ಬಂಡವಾಳವನ್ನು 25,000 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯೊಂದನ್ನು ಕೇಂದ್ರ ಸಿದ್ಧಪಡಿಸಿದೆ.
ಈ ಮೂಲಕ, ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ವನ್ನು ಐಪಿಒ ಕಂಪನಿಯನ್ನಾಗಿಸಿ ಬಂಡವಾಳ ಹಿಂತೆಗೆತಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ ಎಲ್‌ಐಸಿ ಷೇರುಗಳು ಮಾರಾಟ ಆರಂಭವಾದಾಗಿನಿಂದ ಮುಂದಿನ ಐದು ವರ್ಷಗಳವರೆಗೆ ಕಂಪನಿಯ ಶೇ. 75ರಷ್ಟು ಷೇರುಗಳನ್ನು ಸರ್ಕಾರವೇ ಹೊಂದಿರಲಿದೆ ಎಂದು ತಿಳಿಸಲಾಗಿದೆ.ಐದು ವರ್ಷಗಳ ನಂತರ ಸರ್ಕರವು ತನ್ನ ಪಾಲಿನ ಷೇರನ್ನು ಶೇ.೭೫ರಿಂದ ಶೇ. 50ಕ್ಕೆ ಇಳಿಸಲಿದೆ. ಅಲ್ಲದೆ, ಪಾಲಿಸಿದಾರರ ಷೇರು ಪ್ರಮಾಣವನ್ನು ಶೇ. 10ಕ್ಕೆ ಮಿತಿಗೊಳಿಸಲು ಸಹ ನಿರ್ಧರಿಸಲಾಗಿದೆ.. 1956ರಲ್ಲಿ 5 ಕೋಟಿ ರೂ. ಮೂಲ ಬಂಡವಾಳದಿಂದ ಆರಂಭಗೊಂಡ ಎಲ್‌ಐಸಿ, ಈಗ 31 ಲಕ್ಷ ಕೋಟಿ ರೂ.ಗಳ ಆಸ್ತಿ ಹೊಂದಿದೆ.ಸರ್ಕಾರವು ಈಗ ಎಲ್‌ಐಸಿಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದೆ. ಈಗ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಸಾರ್ವಜನಿಕ ವಲಯದ ಉದ್ಯಮ(ಪಿಎಸ್‌ಯು)ದ ಬಂಡವಾಳ ಹಿಂತೆಗೆತದ ಬಗ್ಗೆ ಪ್ರಬಲ ಪ್ರತಿಪಾದನೆ ಮಾಡಿದ್ದರು ಎಂಬುದು ಗಮನಾರ್ಹ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement