2000 ರೂ ನೋಟುಗಳನ್ನು ಆರ್‌ಬಿಐ ಹಿಂಪಡೆದ ನಂತರ ಈವರೆಗೆ ಬ್ಯಾಂಕುಗಳಿಗೆ ವಾಪಸ್‌ ಬಂದ ನೋಟುಗಳು ಎಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗಿನಿಂದ 2,000 ರೂಪಾಯಿಗಳ ನೋಟುಗಳಲ್ಲಿ 76%ರಷ್ಟು ಬ್ಯಾಂಕ್‌ಗಳಿಗೆ ಹಿಂತಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ಹೇಳಿದೆ.
ಇದರಲ್ಲಿ 2,000 ರೂ ನೋಟುಗಳಲ್ಲಿ 87% ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಮತ್ತು ಉಳಿದ 13 ಪ್ರತಿಶತವನ್ನು ಬದಲಾಯಿಸಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಬಹಿರಂಗಪಡಿಸಿದೆ.
ಬ್ಯಾಂಕ್‌ಗಳು ನೀಡಿದ ಮಾಹಿತಿಯ ಪ್ರಕಾರ, ಮೇ 19 ರಂದು ಘೋಷಣೆಯಾದ ನಂತರ ಚಲಾವಣೆಯಿಂದ ಮರಳಿ ಪಡೆದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು ಜೂನ್ 30, 2023 ರ ಹೊತ್ತಿಗೆ 2.72 ಲಕ್ಷ ಕೋಟಿ ರೂಪಾಯಿಗಳಷ್ಟಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಣಾಮವಾಗಿ, ಜೂನ್ 30 ರಂದು ವ್ಯವಹಾರದ ಮುಕ್ತಾಯದ ವೇಳೆಗೆ, ಚಲಾವಣೆಯಲ್ಲಿರುವ 2000 ರೂ.ಬ್ಯಾಂಕ್‌ ನೋಟುಗಳು 0.84 ಲಕ್ಷ ಕೋಟಿ ರೂ.ಗಳಾಗಿವೆ.
ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ಬ್ಯಾಂಕ್‌ ನೋಟುಗಳಲ್ಲಿ 76% ನೋಟುಗಳು ಹಿಂತಿರುಗಿವೆ” ಎಂದು ಆರ್‌ ಬಿಐ ಹೇಳಿದೆ.
2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಅರ್ಜಿದಾರರಾದ ರಜನೀಶ್ ಭಾಸ್ಕರ್ ಗುಪ್ತಾ ಅವರು ಕೇಂದ್ರೀಯ ಬ್ಯಾಂಕ್‌ಗೆ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಅಧಿಕಾರವಿಲ್ಲ, ಅಂತಹ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement