ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವೀಡಿಯೊಗಳು ಸುಲಭವಾಗಿ ಸಿಗುವುದೇ ಅತ್ಯಾಚಾರಕ್ಕೆ ಮುಖ್ಯ ಕಾರಣ : ಗುಜರಾತ್ ಗೃಹ ಸಚಿವ

ಅಹಮದಾಬಾದ್ : “ಅಶ್ಲೀಲ ವಿಡಿಯೋಗಳು ( ಪೋರ್ನ್ ವಿಡಿಯೋಗಳು) ಸುಲಭವಾಗಿ ಫೋನ್ ನಲ್ಲಿ ಸಿಗುವುದರಿಂದ ಭಾರತದಲ್ಲಿ ಅತ್ಯಾಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.
ಅತ್ಯಾಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ “ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯಲು ಮತ್ತೊಂದು ಪ್ರಮುಖ ಕಾರಣ, ನೆರೆ ಹೊರೆಯವರು, ಸಬಂಧಿಕರು ಅಪರಾಧಿಗಳಾಗುತ್ತಿದ್ದಾರೆ. ಯುವತಿಯರ ವಿಚಾರದಲ್ಲಿ ನಮ್ಮ ನೆರೆ ಹೊರೆಯವರಿಂದಲೇ ತಪ್ಪು ನಡೆಯುತ್ತಿದೆ” ಎಂದು ಆವರು ಹೇಳಿದರು.

ಇತ್ತೀಚೆಗೆ ಬಿಡುಗಡೆಗೊಂಡ ಸಮೀಕ್ಷೆಯೊಂದರ ಪ್ರಕಾರ, ಮೊಬೈಲ್ ಫೋನ್ ಗಳು ಹಾಗೂ ಪರಿಚಯಸ್ಥ ಅಪರಾಧಿಗಳಿಂದ ಭಾರತದಲ್ಲಿ ಅತ್ಯಾಚಾರ ನಡೆಯುತ್ತಿದೆ. ಅತ್ಯಾಚಾರ ಘಟನೆಗಳಿಗೆ ನಾವು ಯಾವಾಗಲೂ ಪೊಲೀಸರನ್ನು ದೂಷಿಸುತ್ತೇವೆ ಆದರೆ ಇಂತಹ ಘಟನೆಗಳು ಸಮಾಜಕ್ಕೆ ಕಳಂಕ. ಇಂತಹ ಘಟನೆಗಳಿಗೆ ನಾವು ಪೊಲೀಸರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದರು.
ನಮ್ಮ ದೇಶದಲ್ಲಿ ಗುಜರಾತ್ ಅತ್ಯಂತ ಸುರಕ್ಷಿತವಾಗಿದೆ. ತಂದೆ ಮಗಳ ಮೇಲೆ ಅತ್ಯಾಚಾರವೆಸಗಿದರೆ ಅದಕ್ಕೆ ಕಾರಣ ಅವರ ಮೊಬೈಲ್ ಫೋನ್” ಎಂದು ಮತ್ತೊಮ್ಮೆ ಫೋನ್ ಬಳಕೆ ಬಗ್ಗೆ ಹರ್ಷ ಸಂಘವಿ ಒತ್ತಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement