ಮೈಸೂರು: ಚಿರತೆ ದಾಳಿಗೆ ಬಾಲಕ ಸಾವು, ಗ್ರಾಮದ ಸಮೀಪ ಚಿರತೆ ಎಳೆದೊಯ್ದ ಶವ ಪತ್ತೆ

ಮೈಸೂರು : ಜಿಲ್ಲೆಯ ಟಿ.ನರಸಿಪುರ ತಾಲೂಕಿನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಈಗ 11 ವರ್ಷದ ಬಾಲಕನನ್ನ ಚಿರತೆ ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೃತ ಬಾಲಕನನ್ನು ಹೊರಳಹಳ್ಳಿ ಗ್ರಾಮದ ಜಯಂತ (11) ಎಂದು ಗುರುತಿಸಲಾಗಿದೆ. ಬಾಲಕ ಜಯಂತನ ಶವಕ್ಕಾಗಿ ರಾತ್ರಿಯೆಲ್ಲಾ ಗ್ರಾಮಸ್ಥರು ಹುಡುಕಾಟ ನಡೆಸಿದ್ದು ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. ಬಹಿರ್ದೆಸೆಗೆ ಹೋದ ಸಮಯದಲ್ಲಿ ಚಿರತೆ ದಾಳಿ ಮಾಡಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿಗಳು, ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಚಿರತೆ ದಾಳಿಗೆ ಒಂದು ದಿನದ ಹಿಂದೆ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಕನ್ನಾಯಕನಹಳ್ಳಿ ಗ್ರಾಮದ ನಿಂಗರಾಜು ಅವರ ಪತ್ನಿ ಸಿದ್ದಮ್ಮ (60) ಎಂಬವರನ್ನು ಚಿರತೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಗ ಶನಿವಾರ ರಾತ್ರಿ ಚಿರತೆ ದಾಳಿಗೆ ಬಾಲಕ ಮೃತಪಟ್ಟಿದ್ದಾನೆ. ತಾಲೂಕಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಚಿರತೆ ದಾಳಿಗೆ ಇದು ನಾಲ್ಕನೇ ಸಾವಾಗಿದೆ. ಆಗಸ್ಟ್‌ 30ರಂದು ಉಕ್ಕಲಗೆರೆ ಮಂಜುನಾಥ್‌, ಡಿಸೆಂಬರ್‌ 1ರಂದು ಎಂ. ಕೆಬ್ಬೆಹುಂಡಿಯ ಮೇಘನಾ ಎಂಬವರನ್ನು ಚಿರತೆ ದಾಳಿ ಮಾಡಿ ಕೊಂದಿತ್ತು. ಈಗ ಬಾಲಕನ ಮೇಲೆ ಎರಗಿದ ಚಿರತೆ ದೇಹವನ್ನು ಒಯ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement