
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಇಮೇಲ್ ಕಳುಹಿಸಿದ್ದಕ್ಕಾಗಿ 21 ವರ್ಷದ ವ್ಯಕ್ತಿಯನ್ನು ರಾಜಸ್ಥಾನದ ಜೋಧಪುರದಲ್ಲಿ ಭಾನುವಾರ ಬಂಧಿಸಲಾಗಿದೆ. ಕಳೆದ ವರ್ಷ ಪಂಜಾಬಿ ಗಾಯಕನ ಹತ್ಯೆಯನ್ನು ಉಲ್ಲೇಖಿಸಿ ‘ನೀವು ಸಿಧು ಮೂಸ್ ವಾಲಾದಂತೆ ಕೊನೆಗೊಳ್ಳುತ್ತೀರಿ’ ಎಂದು ಬರೆದ ಇಮೇಲ್ ಅನ್ನು 2-3 ದಿನಗಳ ಹಿಂದೆ ಸಲ್ಮಾನ್ ಕಚೇರಿಗೆ ಕಳುಹಿಸಲಾಗಿದೆ.
ಆರೋಪಿಯನ್ನು ಧಾಕದ್ರಾಂ ಬಿಷ್ಣೋಯ್ ಎಂದು ಗುರುತಿಸಲಾಗಿದ್ದು, ಮುಂಬೈ ಪೊಲೀಸರು ಹಾಗೂ ರಾಜಸ್ಥಾನ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಜೋಧ್ಪುರದ ಲುನಿ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಚಾ ಕಲಾನ್ ಗ್ರಾಮದ ನಿವಾಸಿ ಬಿಷ್ಣೋಯ್ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಜಾಮೀನಿನ ಮೇಲೆ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಇ-ಮೇಲ್ ಕುರಿತು ಇತ್ತೀಚೆಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪ್ರಶಾಂತ್ ಗುಂಜಾಲ್ಕರ್ ಎಂಬುವರು ಸಲ್ಮಾನ್ ಖಾನ್ ಅವರ ಬಾಂದ್ರಾ ಮೂಲದ ನಿವಾಸಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ ಮತ್ತು ಕಲಾವಿದರ ನಿರ್ವಹಣಾ ಕಂಪನಿಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಖಾನ್ ಅವರ ಕಚೇರಿಯಲ್ಲಿ ಗುಂಜಾಲ್ಕರ್ ಇದ್ದಾಗ, “ರೋಹಿತ್ ಗಾರ್ಗ್” ಐಡಿಯಿಂದ ಇಮೇಲ್ ಸ್ವೀಕರಿಸಿರುವುದನ್ನು ಅವರು ಗಮನಿಸಿದರು.
ಹಿಂದಿಯಲ್ಲಿ ಬರೆದ ಇ-ಮೇಲ್ ಕಳುಹಿಸುವವರು “ಗೋಲ್ಡಿ ಭಾಯ್ (ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್) ವಿಷಯವನ್ನು ಮುಕ್ತಾಯಗೊಳಿಸಲು ಸಲ್ಮಾನ್ ಖಾನ್ ಅವರೊಂದಿಗೆ ಮುಖಾಮುಖಿ ಮಾತನಾಡಲು ಬಯಸಿದ್ದಾರೆ”, “ಅಗ್ಲಿ ಬಾರ್, ಜಟ್ಕಾ ದೇಖನೆ ಕೋ ಮಿಲೇಗಾ ( ಮುಂದಿನ ಬಾರಿ ನೀವು ಆಘಾತಕಾರಿ ಏನನ್ನಾದರೂ ನೋಡುತ್ತೀರಿ) ಎಂದು ಬೆದರಿಕೆ ಹಾಕಿದ್ದರು.
ಇದಕ್ಕೂ ಮುನ್ನ ಮುಂಬೈ ಪೊಲೀಸರು ಮಾರ್ಚ್ 18 ರಂದು ಸಲ್ಮಾನ್ ಖಾನ್ಗೆ ಬೆದರಿಕೆ ಇ-ಮೇಲ್ಗೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ