ಎರಡು ವರ್ಷದಿಂದ 2,000 ನೋಟು ಮುದ್ರಿಸಿಲ್ಲ; ಸರ್ಕಾರ

ನವ ದೆಹಲಿ: ಭಾರತದ ಅತಿ ಹೆಚ್ಚು ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ 2,000 ಮುಖಬೆಲೆಯ ನೋಟುಗಳನ್ನ ಮುದ್ರಿಸಲಾಗಿಲ್ಲ ಎಂದು ಸರ್ಕಾರ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದೆ.
2018ರ ಮಾರ್ಚ್ 30ರಂದು 3,362 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದು, ಕ್ರಮವಾಗಿ ಶೇ.3.27 ಮತ್ತು ಶೇ.37.26ರಷ್ಟು ಚಲಾವಣೆಯಲ್ಲಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
2021ರ ಫೆಬ್ರವರಿ 26ರ ಪ್ರಕಾರ, 2,499 ದಶಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು,
‘ಸಾರ್ವಜನಿಕರ ವಹಿವಾಟುಗಳಿಗೆ ಅನುಕೂಲವಾಗುವಂತೆ ಅಪೇಕ್ಷಿತ ನೋಟುಗಳ ಮಿಶ್ರಣವನ್ನ ನಿರ್ವಹಿಸಲು ಆರ್ ಬಿಐನೊಂದಿಗೆ ಸಮಾಲೋಚಿಸಿ, ನಿರ್ದಿಷ್ಟ ಮುಖಬೆಲೆಯ ನೋಟುಗಳ ಮುದ್ರಣವನ್ನು ಸರ್ಕಾರ ನಿರ್ಧರಿಸುತ್ತದೆ.2019-20 ಮತ್ತು 2020-21ರ ಅವಧಿಯಲ್ಲಿ 2000 ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಮುದ್ರಣಾಲಯಗಳಲ್ಲಿ ಯಾವುದೇ ಇಂಡೆಂಟ್ ಅಳವಡಿಸಿಲ್ಲ ಎಂದು ಅವರು ಹೇಳಿದರು.
ಆದರೆ, 2017-18ರಲ್ಲಿ 111.507 ದಶಲಕ್ಷ ನೋಟುಗಳನ್ನು ಮುದ್ರಿಸಲಾಗಿದ್ದು, 2018-19ನೇ ಸಾಲಿನಲ್ಲಿ 46.690 ದಶಲಕ್ಷ ನೋಟುಗಳು ಚಲಾವಣೆಗೆ ಬಂದಿದೆ. ಏಪ್ರಿಲ್ 2019 ರಿಂದ ಯಾವುದೇ ಹೊಸ 2,000 ನೋಟುಗಳನ್ನು ಮುದ್ರಿಸಿರಲಿಲ್ಲ.
ಹೊಸ 500 ನೋಟು ಮುದ್ರಣಗೊಂಡಾಗ 1,000 ನೋಟುಗಳನ್ನ ರದ್ದು ಮಾಡಲಾಯಿತು. ಬದಲಿಗೆ 2,000 ನೋಟನ್ನು ಪರಿಚಯಿಸಲಾಯಿತು. 2000 ಹೊರತುಪಡಿಸಿ, ಚಲಾವಣೆಯಲ್ಲಿರುವ ಇತರ ಕರೆನ್ಸಿ ನೋಟುಗಳೆಂದ್ರೆ, 10, 20, 50 ಮತ್ತು 100 ರೂ. ಮುಖ ಬೆಲೆಯ ನೋಟುಗಳು.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement