ಕೊರೊನಾ 2ನೇ ಅಲೆಯಲ್ಲಿ ದೇಶಾದ್ಯಂತ 594 ವೈದ್ಯರ ಸಾವು: ಏಮ್ಸ್

ನವ ದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಯಲ್ಲಿ ದೇಶಾದ್ಯಂತ ಸುಮಾರು 594 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.
ಈ ಪೈಕಿ ದೆಹಲಿಯಲ್ಲೇ 107 ವೈದ್ಯರು ಮೃತಪಟ್ಟರೆ ಬಿಹಾರದಲ್ಲಿ 96 ವೈದ್ಯರು ಮೃತಪಟ್ಟಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಾಹಿತಿ ನೀಡಿದೆ.
ದೇಶಾದ್ಯಂತ 2ನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟ ವೈದ್ಯರ ಕುರಿತ ದತ್ತಾಂಶಗಳನ್ನು ಏಮ್ಸ್ ನೀಡಿದ್ದು, ದೇಶಾದ್ಯಂತ ಒಟ್ಟು 594 ವೈದ್ಯರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಪೈಕಿ ದೆಹಲಿಯಲ್ಲಿ ಅತ್ಯಧಿಕ, 107 ಮಂದಿ ವೈದ್ಯರು ಮೃತಪಟ್ಟಿದ್ದು, ಬಿಹಾರದಲ್ಲಿ 96 ವೈದ್ಯರು, ಉತ್ತರ ಪ್ರದೇಶದಲ್ಲಿ 67 ಮಂದಿ ವೈದ್ಯರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 8 ವೈದ್ಯರು ಸೋಂಕಿಗೆ ನಿಧನರಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಮೊದಲ ಅಲೆಯಲ್ಲಿ ದೇಶದಲ್ಲಿ 748 ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದರು. ಆದರೆ 2ನೇ ಅಲೆ ಆರಂಭವಾಗಿ 3 ತಿಂಗಳಲ್ಲಿಯೇ 594 ವೈದ್ಯರು ಜೀವಕಳೆದುಕೊಂಡಿದ್ದಾರೆ. ಕೊರೋನಾ ಸೋಂಕಿನ 2ನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿದ್ದು, ಪ್ರಮುಖವಾಗಿ ಆರೋಗ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಮಂದಿ ಸಿಬ್ಬಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಐಎಂ ಅಧ್ಯಕ್ಷ ಡಾ.ಜೆ.ಎ. ಜಯಲಾಲ್ ಹೇಳಿದ್ದಾರೆ.
ಪ್ರಸ್ತುತ ಐಎಂಎ ಬಳಿ 3.5 ಲಕ್ಷ ಕಾರ್ಯನಿರತ ವೈದ್ಯ ಸದಸ್ಯರ ದತ್ತಾಂಶ ಮಾತ್ರ ಇದ್ದು,, ದೇಶಾದ್ಯಂತ 12ಲಕ್ಷಕ್ಕೂ ಅಧಿಕ ವೈದ್ಯರು ಕೋವಿಡ್ ಸಾಂಕ್ರಾಮಿಕದ ವೇಳೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಸಾಮರ್ಥ್ಯ ಬಹಿರಂಗ...| ಪಾಕಿಸ್ತಾನದ ಮುರಿದ್ ಸೇನಾ ನೆಲೆಯ ಭೂಗತ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದನ್ನು ತೋರಿಸಿದ ಉಪಗ್ರಹ ಚಿತ್ರಗಳು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement