ನಟ ದರ್ಶನ್‌ ಬಂಧನದ ಬೆನ್ನಲ್ಲೇ ಪತಿಯನ್ನು ಅನ್ ಫಾಲೋ ಮಾಡಿ ಪ್ರೊಫೈಲ್ ಫೋಟೋ ತೆಗೆದು ಹಾಕಿದ ಪತ್ನಿ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬವರ ಭೀಕರ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌, ಆತನ ಪ್ರೇಯಸಿ ಪವಿತ್ರಾ ಗೌಡ ಹಾಗೂ 11 ಮಂದಿ ಸಹಚರರನ್ನು ಬೆಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ ಬೆನ್ನಲ್ಲೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಇನ್​ಸ್ಟಾಗ್ರಾಮ್ ಫೋಟೋ ತೆಗೆದು ಹಾಕಿದ್ದಾರೆ. ಅಲ್ಲದೆ ದರ್ಶನ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ರೇಣುಕಾಸ್ವಾಮಿ … Continued

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ: ತನಿಖೆ ಆಗುವವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದ ಗೃಹ ಸಚಿವರು

ಬೆಂಗಳೂರು : ನಗರದಲ್ಲಿ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಎಂಬ ಮಾಹಿತಿ ಇದೆ. ಅದರ ಮೇಲೆ ತನಿಖೆ ಆಗುವವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಯಾವ … Continued

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್‌ ಬಂಧನದ ಬೆನ್ನಲ್ಲೇ ಸ್ನೇಹಿತೆ ನಟಿ ಪವಿತ್ರಾ ಗೌಡ ಪೊಲೀಸ್‌ ವಶಕ್ಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಿದ ಆರೋಪದಲ್ಲಿ ಸ್ಯಾಂಡಲ್‌ವುಡ್‌ ಖ್ಯಾತ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಗೆಳತಿ ನಟಿ ಪವಿತ್ರ ಗೌಡ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಪೊಲೀಸರು … Continued

ಹೆತ್ತ ತಾಯಿಯನ್ನು ಬಿಡ್ಲಿಕ್ಕೆ ಆಗುತ್ತಾ..? : ಸುಮಲತಾ ಪರ ಪ್ರಚಾರ ಮಾಡುವ ಸುಳಿವು ನೀಡಿದ ನಟ ದರ್ಶನ್

ಮಂಗಳೂರು: ಸುಮಲತಾ ಅವರು ನಮ್ಮ ಅಮ್ಮ, ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟುಕೊಡಲಿಕ್ಕೆ ಆಗುತ್ತದೆಯೇ ಎಂದು ನಟ ದರ್ಶನ್ ಹೇಳಿದ್ದು, ಈ ಮೂಲಕ ಈ ಸಲ ಕೂಡ ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ ಪರ ಪ್ರಚಾರ ನಡೆಸುವ ಸುಳಿವು ನೀಡಿದ್ದಾರೆ. ಅವರು ಭಾನುವಾರ ಮಂಗಳೂರಿನ ಉಳ್ಳಾಲ ಸಮೀಪದ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ್ದ … Continued

ಮಹಿಳೆ ಮೇಲೆ ನಾಯಿ ದಾಳಿ ಪ್ರಕರಣ ; ವಿಚಾರಣೆಗೆ ಹಾಜರಾದ ನಟ ದರ್ಶನ್

ಬೆಂಗಳೂರು: ಮಹಿಳೆಯೊಬ್ಬರಿಗೆ ದರ್ಶನ ಮನೆಯ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ.15 ರಂದು ಬುಧವಾರ ನಟ ದರ್ಶನ್​ ಅವರು ರಾಜರಾಜೇಶ್ವರಿ​ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಮಹಿಳೆ ಮೇಲೆ ದರ್ಶನ್ ಮನೆಯ ಸಾಕು ನಾಯಿ ದಾಳಿ ನಡೆಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದರ್ಶನ ವಿರುದ್ಧವೂ ದೂರು ದಾಖಲಿಸಿದ್ದರು. ಮಹಿಳೆ ನೀಡಿದ ದೂರಿನ ಮೇರೆಗೆ … Continued

ನಟ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು : ಹುಲಿ ಉಗುರಿನ ಲಾಕೆಟ್‌ ಧರಿಸಿದ್ದ ಆರೋಪದ ಅಡಿಯಲ್ಲಿ ಬಿಗ್ ಬಾಸ್ 10ನೇ ಆವೃತ್ತಿಯ ಅಭ್ಯರ್ಥಿ ವರ್ತೂರು ಸಂತೋಷ ಅವರ ಬಂಧನದ ಬೆನ್ನಲ್ಲೇ ನಟ ದರ್ಶನ ವಿರುದ್ಧ ಕೂಡ ಹುಲಿ ಉಗುರು ಧರಿಸಿದ ಆರೋಪ ಮಾಡಿ ದೂರು ನೀಡಲಾಗಿದೆ ಎಂದು ವರದಿಯಾಗಿದೆ. ದರ್ಶನ್ ಹುಲಿ ಉಗುರು ಲಾಕೆಟ್ ಧರಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. … Continued

ನಿರ್ಮಾಪಕನಿಗೆ ಜೀವ ಬೆದರಿಕೆ ಪ್ರಕರಣ: ನಟ ದರ್ಶನ್‌ ವಿರುದ್ಧ ದೂರು ದಾಖಲು

ಬೆಂಗಳೂರು: ಸಿನೆಮಾ ನಿರ್ಮಾಪಕ ಭರತ್‌ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆಂಗೇರಿ ಪೊಲೀಸ್ ಠಾಣೆ ನಟ ದರ್ಶನ್‌ ವಿರುದ್ಧ ಎನ್‌ಸಿಆರ್ ದಾಖಲಾಗಿದೆ. ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡು ಸ್ವೀಕೃತಿ ನೀಡಲಾಗಿದೆ. ಭರತ್‌ ಅವರು ದೂರು ದಾಖಲಿಸಿದ್ದಾರೆ. ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವೊಂದನ್ನು ನಿರ್ಮಾಪಕ ಭರತ್ ಕಳೆದ … Continued

ವೇಟರ್‌ ಆರ್ಡರ್‌ ತರುವುದು ಲೇಟ್‌ ಮಾಡಿದ್ದಕ್ಕೆ ಪ್ರಶ್ನಿಸಿದ್ದೆ, ಇಂದ್ರಜೀತ್‌ ಲಂಕೇಶ್‌ ಅವರು ಇನ್ವೆಸ್ಟಿಗೇಟರಾ: ನಟ ದರ್ಶನ್‌

ಬೆಂಗಳೂರು: ಹೋಟೆಲ್‌ನಲ್ಲಿ ವೇಟರ್‌ ಮೇಲೆ ನಟ ದರ್ಶನ್‌ ಹಲ್ಲೆ ನಡೆಸಿದ್ದರು ಎಂಬ ಇಂದ್ರಜಿತ್‌ ಲಂಕೇಶ್‌ ಅವರ ಆರೋಪವನ್ನು ದರ್ಶನ್‌ ತಳ್ಳಿಹಾಕಿದ್ದಾರೆ. ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದರ್ಶನ್‌, ಆರ್ಡರ್‌ ತರುವುದನ್ನು ತಡ ಮಾಡಿದ್ದಕ್ಕೆ ಸಿಟ್ಟು ಮಾಡಿದ್ದೇನೆ. ಯಾಕಪ್ಪಾ ಲೇಟು, ಬೇಗ ಬಾ ಎಂದು ಕೇಳಿದ್ದೇನೆ ಅಷ್ಟೆ. ಅದು ಮಾತುಕತೆಯಲ್ಲೇ ಮುಗಿದಿದೆ. ನಾನು … Continued