ರಾಯಚೂರು | ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಮನಬಂದಂತೆ ಥಳಿತ

ರಾಯಚೂರು: ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿಯೋರ್ವನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ನಾಲ್ವರು ವ್ಯಕ್ತಿಗಳು ಗ್ರಾಮಸ್ಥರ ಮುಂದೆಯೇ ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಹೇಳಲಾಗಿದೆ. 20 ದಿನದ ಹಿಂದೆ ದುರುಗಪ್ಪ … Continued

ದಾಳಿ ಮಾಡಿದ್ದ ಚಿರತೆಯನ್ನೇ ಕೊಂದು ಹಾಕಿದ ಗ್ರಾಮಸ್ಥರು

ರಾಯಚೂರು :ಜಿಲ್ಲೆಯ ದೇವದುರ್ಗ ತಾಲೂಕಿನ ಕರಡಿಗುಡ್ಡ ಪಕ್ಕದಲ್ಲಿ ಕಂಬದಾಳ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸುತ್ತಲಿನ ಗ್ರಾಮಸ್ಥರು ಕೊಂದು ಹಾಕಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಬೆಳಿಗ್ಗೆ ಊರ ಹೊರಗಿನ ಗುಡ್ಡದಲ್ಲಿ ಚಿರತೆ ದಾಳಿ ಮಾಡಿತ್ತು. ಇದರಲ್ಲಿ ರಮೇಶ, ಮಲ್ಲಣ್ಣ, ರಂಗನಾಥ ಎಂಬವರಿಗೆ ಗಾಯಗಳಾಗಿದ್ದು, ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ … Continued

ಚಿರತೆ ಹೆದರಿಸಲು ಹೋದವರ ಮೇಲೆಯೇ ದಾಳಿ ಮಾಡಿದ ಚಿರತೆ ; ಮೂವರಿಗೆ ಗಾಯ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ಭಾನುವಾರ ಮೂವರ ಮೇಲೆ ಚಿರತೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರು ಭಾನುವಾರ ಬೆಳಿಗ್ಗೆ ಬಹಿರ್ದೆಸೆಗೆ ಹೋದಾಗ ಅವರಿಗೆ ಚಿರತೆ ಕಂಡಿದ್ದು, ಹೆದರಿ ಓಡಿ ಬಂದ ಅವರು ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹೊರ ಹೋಗುವ ‌ಮಕ್ಕಳ ಮೇಲೆ … Continued

ಗಾಢ ನಿದ್ರೆಯಲ್ಲಿದ್ದವರ ಮೇಲೆ ಹರಿದ ಜೆಸಿಬಿ, ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವು

ರಾಯಚೂರು : ಜೆಸಿಬಿಯೊಂದು ಹರಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ಇಂದು(ಬುಧವಾರ) ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಛತ್ತೀಸ್‌ಗಢ ಮೂಲದ ಕೃಷ್ಣಾ (25) ಶಿವುರಾಮ (30) ಹಾಗೂ ಬಲರಾಮ (28) ಎಂದು ಗುರುತಿಸಲಾಗಿದೆ. ಅವರು ಬೋರ್‌ವೆಲ್ ಕೆಲಸ ಮುಗಿಸಿಕೊಂಡು ರಾತ್ರಿ ಜಮೀನಿನಲ್ಲೇ ಮಲಗಿದ್ದ ವೇಳೆ … Continued

ಬಾಲಕಿ ಕಾಪಾಡಲು ಹೋಗಿ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಸಹೋದರರು

ರಾಯಚೂರು: ಕೃಷ್ಣಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅಣ್ಣನ ಮಗಳನ್ನು ಕಾಪಾಡಲು ಹೋಗಿ ಅಣ್ಣತಮ್ಮಂದಿರಿಬ್ಬರು ನದಿಯಲ್ಲಿ ಕೊಚ್ಚಿ ಹೋದ ಘಟನೆ ರಾಯಚೂರು ತಾಲೂಕಿನ ದೇವದುರ್ಗದ ಕೋಪ್ಪರ ಗ್ರಾಮದ ಬಳಿ ಸಂಭವಿಸಿದ ವರದಿಯಾಗಿದೆ. ಕೊಚ್ಚಿ ಹೋದವರನ್ನು ರಜಾಕ್ ಮುಲ್ಲಾಉಸ್ಮಾನ್ (35), ಮೌಲಾಲಿ ಉಸ್ಮಾನ (32) ಎಂದು ಹೇಳಲಾಗಿದೆ. ಕೊಪ್ಪರ ಗ್ರಾಮದ ಇವರು ಕುಟುಂಬ ಸಮೇತ ನದಿ ದಂಡೆಯಲ್ಲಿ ಬಟ್ಟೆ … Continued