ಸುಳ್ಳು ವದಂತಿ ನಂಬದಿರಿ; ಚಿರತೆ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಗ್ರಾಪಂ, ಅರಣ್ಯ ಇಲಾಖೆಗೆ ತಿಳಿಸಿ

ಹುಬ್ಬಳ್ಳಿ: ಹುಬ್ಬಳ್ಳಿಯ ಗುಡಿಸಾಗರ, ಬೂದನಗುಡ್ಡ, ಅಂಚಟಗೇರಿ ಸೇರಿದಂತೆ ಇತರ ಭಾಗದಲ್ಲಿ ಇಲ್ಲಿಯವರೆಗೆ ಮತ್ತು ನಿನ್ನೆ ದಿನ ಸಹ ಚಿರತೆ ಕಂಡುಬಂದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿಲ್ಲ ಎಂದು ಡಿಎಫ್‌ಒ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ. ಆದಾಗ್ಯೂ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆ ಭಾಗದಲ್ಲಿ ನಿರಂತರ ಪರಿಶೀಲನೆ, ಗಸ್ತು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. … Continued