ಸಿಡಿ ಪ್ರಕರಣ ಈಗ ಇಡಿ ದೂರಿನವರೆಗೂ ಬಂತು

ಬೆಂಗಳೂರು: ಸಿಡಿ ಪ್ರಕರಣದಲ್ಲಿ ಹಣದ ವಹಿವಾಟು ನಡೆದಿದೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯಕ್ಕೆ ದೂರು ದಾಖಲಾಗಿದೆ. ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯವರು ರಮೇಶ್ ಜಾರಕಿಹೊಳಿ ವಿರುದ್ಧ ಇಡಿಗೆ ದೂರು ನೀಡಿದ್ದಾರೆ. ಮಾ.9ರಂದು ಶಾಸಕ ರಮೇಶ್ ಜಾರಕಿಹೊಳಿ , ಸಿಡಿ ಪ್ರಕರಣದಲ್ಲಿ ತಮ್ಮನ್ನು … Continued

ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಫಾರುಕ್‌ ಹೈಕೋರ್ಟಿಗೆ ಮೊರೆ

ಶ್ರೀನಗರ: ಆಸ್ತಿ ಮುಟ್ಟುಗೋಲು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವ್ಯಾಪ್ತಿಯನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಅಸೋಸಿಯೆಷನ್‌ನಲ್ಲಿ (ಜೆಕೆಸಿಎ) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದಡಿಸೆಂಬರ್‌ 19ರಂದು … Continued

ಬ್ಯಾಂಕ್‌ ಹಗರಣ: ಚೋಕ್ಸಿ, ಗೀತಾಂಜಲಿ ಗ್ರುಪ್‌ನ ೧೪.೪೫ ಕೋಟಿ ರೂ. ಅಟ್ಯಾಚ್‌

ಮುಂಬೈ: ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಮೆಹುಲ್‌ ಚೋಕ್ಸಿಗೆ ಸೇರಿದ ಗೀತಾಂಜಲಿ ಗ್ರೂಪ್‌ನ 14.45 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಅಟ್ಯಾಚ್‌ ಮಾಡಿದೆ. ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಸೋದರಳಿಯ ನೀರವ್ ಮೋದಿಯವರೊಂದಿಗೆ ಸೇರಿ 15,600 ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈನ ಚೋಕ್ಸಿಯ ಸ್ಥಿರಾಸ್ತಿ … Continued

೧೩೦.೫೭ ಕೋಟಿ ರೂ.ಆಸ್ತಿ ಅಟ್ಯಾಚ್‌ ಮಾಡಿದ ಇಡಿ

ಹೈದರಾಬಾದ್‌ : ಜಾರಿ ನಿರ್ದೇಶನಾಲಯವು 130.57 ಕೋಟಿ ರೂ.ಮೌಲ್ಯದ ಆಸ್ತಿ  ಲಗತ್ತಿಸಿದೆ. ಇದರಲ್ಲಿ 41 ಸ್ಥಿರ ಆಸ್ತಿಗಳಾದ ಮುಸದ್ದಿಲಾಲ್ ಜೆಮ್ಸ್ ಮತ್ತು ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್  ಹಗರಣದಲ್ಲಿ ಭಾಗಿಯಾಗಿದೆ. 18.69 ಕೋಟಿ ರೂ.ಗಳ ವಹಿವಾಟಿನಲ್ಲಿ ಷೇರು ರೂಪದಲ್ಲಿ ಚಲಿಸಬಲ್ಲ ಆಸ್ತಿಗಳು ಮತ್ತು ಷೇರು ಮಾರುಕಟ್ಟೆಯಲ್ಲಿ   0.63 ಕೋಟಿ  ರೂ.ಗಳ ರೂಪದಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು … Continued