ನನ್ನ ಇಲಾಖೆಯಲ್ಲಿ ತಮ್ಮವರ ಪರವಾಗಿ ಹಸ್ತಕ್ಷೇಪ; ಸಿಎಂ ಬಿಎಸ್‌ವೈ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ಈಶ್ವರಪ್ಪ..!

ಬೆಂಗಳೂರು; ಕರ್ನಾಟಕದ ಒಂದು ದೊಡ್ಡ ರಾಜಕೀಯ ಬೆಳವಣಿಗೆಯಲ್ಲಿ, ಸಚಿವರೊಬ್ಬರು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ವಿರುದ್ಧ ರಾಜ್ಯಪಾಲ ವಾಜುಭಾಯ್ ವಾಲಾ ಅವರಿಗೆ ಬುಧವಾರ ದೂರು ನೀಡಿದ್ದು, ಇಲಾಖೆಯ ವಿಷಯಗಳಲ್ಲಿ ಮುಖ್ಯಮಂತ್ರಿಗಳ ಅವರ ಸಂಬಂಧಿಕರ ಪರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ನ್ಯೂಸ್‌ ಮಿನಿಟ್‌ ವರದಿ ಮಾಡಿದೆ. ಆ ವರದಿ ಪ್ರಕಾರ, ಯಡಿಯೂರಪ್ಪ ಅವರ ಸಚಿವ ಸಂಪುಟದ … Continued

ನಿಗದಿತ ಸಮಯಕ್ಕೆ ಜಿಪಂ, ತಾಪಂ ಚುನಾವಣೆ ನಡೆಯಲಿದೆ

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ಮುಂದೂಡುವುದಿಲ್ಲ ಇಲ್ಲ. ನಿಗದಿತ ಸಮಯಕ್ಕೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ವಿಧಾನಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ಶಾಸಕ ಸುನೀಲುಕುಮಾರ ಅವರು ವಿಷಯ ಪ್ರಸ್ತಾಪಿಸಿದ ವೇಳೆ ಅವರು ಜಿಪಂ, ತಾಪಂ ಚುನಾವಣೆ ಮುಂದೂಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು … Continued

ಮಂತ್ರಿಗಿರಿ ಸಿಗದಿದ್ದಕ್ಕೆ ವಿಶ್ವನಾಥ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ: ಈಶ್ವರಪ್ಪ

ಶಿವಮೊಗ್ಗ: ಸಚಿವ ಸ್ಥಾನ ದೊರೆಯದ ಕಾರಣಕ್ಕೆ ಎಚ್.ವಿಶ್ವನಾಥ ಬಿಜೆಪಿ ಸೇರಿದ್ದರ ಕುರಿತು ಅಸಮಾಧಾನವಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ತಪ್ಪು ಮಾಡಿದ್ದರೆ ಅದನ್ನು ತಿಳಿಸಲಿ, ಅದನ್ನು ಬಿಟ್ಟು ಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಸರಿಯಿದ್ದರೆ ಆ ಪಕ್ಷಗಳನ್ನು ಯಾಕೆ ಬಿಟ್ಟು … Continued

ಶಿವಮೊಗ್ಗದಲ್ಲಿ ದಕ್ಷಿಣ ಆಫ್ರಿಕಾ ‘ರೂಪಾಂತರಿ ವೈರಸ್’ ಪತ್ತೆಯಾಗಿಲ್ಲ

  ಶಿವಮೊಗ್ಗ : ದುಬೈಯಿಂದ ಶಿವಮೊಗ್ಗ ಆಗಮಿಸಿದ್ದ ವ್ಯಕ್ತಿಗೆ ಕೊರೋನಾ ನೆಗಟಿವ್ ವರದಿ ಬಂದಿದ್ದು, ಜಿಲ್ಲೆಯಲ್ಲಿ ದಕ್ಷಿಣ ಆಫ್ರಿಕಾ ಮೂಲಕ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಶುಕ್ರವಾರ ಮೆಗ್ಗಾನ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದುಬೈಯಿಂದ ಆಗಮಿಸಿದ್ದ ವ್ಯಕ್ತಿಯ ಕೊರೋನಾ ವರದಿ ನೆಗಟಿವ್ ಬಂದಿದ್ದು, ಪ್ರಾಥಮಿಕ … Continued

ಯತ್ನಾಳ ಪ್ರಖರ ಹಿಂದುತ್ವವಾದಿ: ಸಚಿವ ಈಶ್ವರಪ್ಪ

ಕಾಂಗ್ರೆಸ್‌ ಹಾಗೂ ಮುಸ್ಲಿಂ ಲೀಗ್‌ ಹೊರತುಪಡಿಸಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬಿಜೆಪಿಯಲ್ಲಿ ಮಡಿವಂತಿಕೆ ಎಂಬುದಿಲ್ಲ, ಆದರೆ ಕಾಂಗ್ರೆಸ್‌ ದೇಶವನ್ನು ದಿವಾಳಿ ಮಾಡಿದ ಪಕ್ಷವಾಗಿದ್ದರೆ, ಮುಸ್ಲಿಂ ಲೀಗ್‌ ಪಕ್ಷ ದೇಶ ವಿರೋಧಿ ಪಕ್ಷವಾಗಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಜೆಡಿಎಸ್‌ ಬಿಜೆಪಿಗೆ ಕೈಕೊಟ್ಟಿದೆ. ಜೆಡಿಎಸ್‌ ಕೈಕೊಡುವುದರಲ್ಲಿ … Continued

ಶುದ್ಧ ಕುಡಿಯುವ ನೀರಿನ ಘಟಕ ಅವ್ಯವಹಾರ ತನಿಖೆಗೆ ಜಂಟಿ ಸದನ ಸಮಿತಿ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ವಿಧಾನ ಪರಿಷತ್‍ನಲ್ಲಿ ಸದಸ್ಯ ರಘುನಾಥ್ ಮಲ್ಕಾಪುರೆ, ಶಶಿಲ್ ಜಿ.ನಮೋಷಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಾಕಷ್ಟು ಮಾಹಿತಿ ನೀಡಬೇಕಿದೆ. ಹಾಗಾಗಿ … Continued