ಸಾಗರ: ವಿದ್ಯುತ್‌ ಕಂಬಕ್ಕೆ ಖಾಸಗಿ ಬಸ್‌ ಡಿಕ್ಕಿ ; ವಿದ್ಯುತ್‌ ಶಾಕ್‌ ಹೊಡೆದು 35 ಪ್ರಯಾಣಿಕರು ಅಸ್ವಸ್ಥ

ಶಿವಮೊಗ್ಗ: ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ವಿದ್ಯುತ್‌ ಆಘಾತಕ್ಕೆ ಒಳಗಾಗಿ ಅದರಲ್ಲಿದ್ದ ಪ್ರಯಾಣಿಕರು ಅಸ್ವಸ್ಥರಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಗೆಣಸಿನಕುಣಿ ಸಮೀಪ ನಡೆದಿದೆ ಎಂದು ಬುಧವಾರ ವರದಿಯಾಗಿದೆ. ಖಾಸಗಿ ಬಸ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಕೂಡಲೇ ವಿದ್ಯುತ್‌ ಕಂಬ ಮುರಿದು ರಸ್ತೆಗೆ ಬಿದ್ದಿದೆ. … Continued