ಇಸ್ರೋ ಕೇಂದ್ರಕ್ಕೆ ಭೇಟಿ: ರಾಜಕಾರಣ, ರಾಜಕೀಯ ನಾಯಕರನ್ನು ದೂರವಿಟ್ಟ ಪ್ರಧಾನಿ ಮೋದಿ
ಬೆಂಗಳೂರು : ಚಂದ್ರಯಾನ-3 ರ ಯಶಸ್ಸಿನ ನಿಮಿತ್ತ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದಾರೆ. ಆದರೆ ಈ ಭೇಟಿಯನ್ನು ರಾಜಕೀಯ ಕಾರ್ಯಕ್ರಮವಾಗದಂತೆ ಸಂಪೂರ್ಣವಾಗಿ ನೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟ ಪ್ರಧಾನಿ, ಬೆಂಗಳೂರಿನ ತಮ್ಮ ಇಸ್ರೋ ಭೇಟಿಯಲ್ಲಿ ಎಲ್ಲಿಯೂ ರಾಜಕೀಯ ಪಕ್ಷಗಳ ನಾಯಕರುಗಳಿಗೆ ಆಸ್ಪದ ನೀಡಲಿಲ್ಲ. … Continued