ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ನಾಪತ್ತೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಗುಚಿ ಬಿದ್ದು ಹೊಳೆ ಊಟಕ್ಕೆ ಹೋಗಿದ್ದ ಐವರಲ್ಲಿ ಮೂವರು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ. ಹುಲಿದೇವರ ಬನದ ಸಂದೀಪ (35), ಸಿಗಂದೂರಿನ ಚೇತನ್ (30) ಹಾಗೂ ಗಿಣಿವಾರದ ರಾಜು (28) ನಾಪತ್ತೆಯಾದವರು ಎಂದು ಹೇಳಲಾಗಿದೆ. ಬುಧವಾರ ಮಧ್ಯಾಹ್ನ ಹೊಳೆ ಊಟಕ್ಕೆಂದು ಐವರು ಯುವಕರು ಕಳಸವಳ್ಳಿ ಬಳಿಯ … Continued

ವಾಲಿಬಾಲ್ ತರಬೇತಿ ನೀಡುತ್ತಿದ್ದ ವೇಳೆ ಕುಸಿದು ಬಿದ್ದು ಶಿಕ್ಷಕ ಸಾವು

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಶಾಲೆ ಆವರಣದಲ್ಲಿಯೇ ಕುಸಿದು ಬಿದ್ದು ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಜಾನನ ಹಿರೇಮಠ (46) ಎಂಬವರು ಮೃತ ಶಿಕ್ಷಕರಾಗಿದ್ದಾರೆ. ಇವರು ಸಾಗರ ಪಟ್ಟಣದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು. ಈ … Continued

ಸಾಗರ: ವಿದ್ಯುತ್‌ ಕಂಬಕ್ಕೆ ಖಾಸಗಿ ಬಸ್‌ ಡಿಕ್ಕಿ ; ವಿದ್ಯುತ್‌ ಶಾಕ್‌ ಹೊಡೆದು 35 ಪ್ರಯಾಣಿಕರು ಅಸ್ವಸ್ಥ

ಶಿವಮೊಗ್ಗ: ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ವಿದ್ಯುತ್‌ ಆಘಾತಕ್ಕೆ ಒಳಗಾಗಿ ಅದರಲ್ಲಿದ್ದ ಪ್ರಯಾಣಿಕರು ಅಸ್ವಸ್ಥರಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಗೆಣಸಿನಕುಣಿ ಸಮೀಪ ನಡೆದಿದೆ ಎಂದು ಬುಧವಾರ ವರದಿಯಾಗಿದೆ. ಖಾಸಗಿ ಬಸ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಕೂಡಲೇ ವಿದ್ಯುತ್‌ ಕಂಬ ಮುರಿದು ರಸ್ತೆಗೆ ಬಿದ್ದಿದೆ. … Continued