ಚೆಂಡೆಂದು ಭಾವಿಸಿ ಕಚ್ಚಾ ಬಾಂಬ್ ಹಾರಿಸಿ ಆಟವಾಡಿದ ಮಕ್ಕಳು; ಸ್ಫೋಟದಿಂದ ಮೂವರಿಗೆ ಗಾಯ
ಕೋಲ್ಕತ್ತಾ: ಕಚ್ಚಾಬಾಂಬ್ ಅನ್ನು ಚೆಂಡು ಎಂದು ಭಾವಿಸಿ ಮಕ್ಕಳು ಆಟವಾಡಿದಾಗ ಸ್ಫೋಟಗೊಂಡು ಮೂವರು ಮಕ್ಕಳು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಮಕ್ಕಳು 11-14 ವರ್ಷದವರಾಗಿದ್ದು, ಮಮುನ್ ಅಲಿ (11), ಆಶಿಕ್ ಶೇಖ್ (14) ಮತ್ತು ಜೆವೆಲ್ ಶೇಖ್ (12) ಎಂದು ಗುರುತಿಸಲಾಗಿದೆ. ಅವರನ್ನು ಮುರ್ಶಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. … Continued