ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಪ್ರಮಾಣವಚನ ಸಮಾರಂಭಕ್ಕೆ ಬನ್ನಿ, ನನ್ನ ಜೊತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ

ಚಂಡೀಗಡ: ಪಂಜಾಬ್‌ನಲ್ಲಿ ಬುಧವಾರ, ಮಾರ್ಚ್‌ ೧೬ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ, ಆಮ್‌ ಆದ್ಮಿ ಪಾರ್ಟಿ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ “ರಾಜ್ಯದ ಮೂರು ಕೋಟಿ ಜನರಿಗೆ” ಮುಖ್ಯಮಂತ್ರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

48 ವರ್ಷದ ಎಎಪಿ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಮೃತಸರದಲ್ಲಿ ರಾಜ್ಯ ಚುನಾವಣೆಯಲ್ಲಿ ಗೆದ್ದ ಇತರ ಅಭ್ಯರ್ಥಿಗಳೊಂದಿಗೆ ಭವ್ಯವಾದ ರೋಡ್‌ಶೋ ನೇತೃತ್ವ ವಹಿಸಿದ ಒಂದು ದಿನದ ನಂತರ ಈ ಮನವಿಯ ವಿಡಿಯೊ ಬಂದಿದೆ.

ಎಎಪಿ ನಾಯಕ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮಾರ್ಚ್ 16 ರಂದು ಖಟ್ಕರ್ ಕಲಾನ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ನಾನಷ್ಟೇ ಅಲ್ಲ, ರಾಜ್ಯದ 3 ಕೋಟಿಗೂ ಅಧಿಕ ಜನರು ನನ್ನೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪರಂಪರೆಯನ್ನು ಒಟ್ಟಾಗಿ ಮುನ್ನಡೆಸುತ್ತೇವೆ, ನಾನು ಒಬ್ಬಂಟಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ, ನೀವೆಲ್ಲರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೀರಿ, ಇದು ನಿಮ್ಮ ಸರ್ಕಾರವಾಗಲಿದೆ ಎಂದು ಭಗವಂತ್‌ ಮಾನ್ ಹೇಳಿದ್ದಾರೆ. ಖಟ್ಕರ್ ಕಲಾನ್ ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾಗಿದೆ.
“ನಿಮ್ಮ ಸಹೋದರನನ್ನು ಪ್ರೋತ್ಸಾಹಿಸಲು, ದಯವಿಟ್ಟು ಬೆಳಿಗ್ಗೆ 10 ಗಂಟೆಗೆ ಖಟ್ಕರ್ ಕಲಾನ್‌ಗೆ ಬನ್ನಿ” ಎಂದು ಎಎಪಿ ನಾಯಕ ವಿನಂತಿಸಿದ್ದಾರೆ. ಮಹಿಳೆಯರು ಕೇಸರಿ ದುಪಟ್ಟಾ ಮತ್ತು ಪುರುಷರು ಕೇಸರಿ ಪೇಟ ಧರಿಸಿ ಬರುವಂತೆ ಅವರು ಮನವಿ ಮಾಡಿದ್ದಾರೆ. ಅಂದು ಖಟ್ಕರ್ ಕಲಾನ್ ಗೆ ಕೇಸರಿ ಬಣ್ಣ ಹಚ್ಚುತ್ತೇವೆ’ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜಮ್ಮು-ಕಾಶ್ಮೀರ : ಮೂವರು ಲಷ್ಕರ್ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಈ ವಿಡಿಯೊವನ್ನು ಅರವಿಂದ ಕೇಜ್ರಿವಾಲ್ ಕೂಡ ಶೇರ್ ಮಾಡಿದ್ದಾರೆ. “ಪಂಜಾಬ್ ಮತ್ತೆ ರಂಗ​​ಲಾ ಪಂಜಾಬ್ ಆಗಲಿದೆ. ಶಹೀದ್‌ ಭಗತ್ ಸಿಂಗ್ ಅವರ ಕನಸುಗಳು ನನಸಾಗುತ್ತವೆ. ಇಡೀ ಪಂಜಾಬ್ ನನ್ನ ಕಿರಿಯ ಸಹೋದರನೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತದೆ. ನಾನು ಭಾಗವಹಿಸುತ್ತಿದ್ದೇನೆ, ದಯವಿಟ್ಟು ನೀವೂ ಬನ್ನಿ.” ಎಂದು ದೆಹಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಎಎಪಿ ರಾಜ್ಯ ಚುನಾವಣೆಯಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳೊಂದಿಗೆ ಅದ್ಭುತ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದ್ದು, ಕೇವಲ 18 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ರಮುಖ ಸುದ್ದಿ :-   ಕೋಲ್ಕತ್ತಾ ವಶಪಡಿಸಿಕೊಳ್ಳಲು ಆತ್ಮಹತ್ಯಾ ಬಾಂಬರ್‌ಗಳನ್ನು ಕಳುಹಿಸ್ತೇನೆ ': ಬಾಂಗ್ಲಾದೇಶ ಮೂಲಭೂತವಾದಿಯಿಂದ ಹಿಂದೂಗಳ ವಿರುದ್ಧ ಬೆದರಿಕೆ ವೀಡಿಯೊ ವೈರಲ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement