ಡಿ.ಕೆ. ಶಿವಕುಮಾರ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು :  ಸಹೋದರನ ಪರವಾಗಿ ಮತಯಾಚನೆ ಮಾಡುವ ವೇಳೆಯಲ್ಲಿ ಅಪಾರ್ಟ್ಮೆಂಟ್‌ ಒಂದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.
ಆರ್ ಆರ್ ನಗರ ಅಪಾರ್ಟ್ಮೆಂಟ್ ಒಂದರಲ್ಲಿ ಮತಯಾಚನೆ ವೇಳೆ ಡಿ.ಕೆ.ಶಿವಕುಮಾರ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿದ ನಂತರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ ಪರ ಡಿ.ಕೆ. ಶಿವಕುಮಾರ ಪ್ರಚಾರ ಮಾಡಿದ್ದರು. ಮತಯಾಚನೆ ವೇಳೆ ಅವರು ಬೆದರಿಕೆ ಹಾಕಿದ್ದಾರೆ ಹಾಗೂ ಮತದಾರರನ್ನು ಬ್ಲ್ಯಾಕ್​ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿತ್ತು. ಈ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿತ್ತು. ನಂತರ ಅವರ ವಿರುದ್ಧ ಆಮಿಷ ಮತ್ತು ಅನಗತ್ಯ ಪ್ರಭಾವ ಬಳಸುವ ಆರೋಪದಡಿ ಪ್ರಕರಣ ದಾಖಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement