ಬೊಮ್ಮಾಯಿ ಸಂಪುಟದಲ್ಲಿ ಕಲಬುರಗಿ, ರಾಯಚೂರು, ಯಾದಿಗಿರಿ ಜಿಲ್ಲೆ ಕಡೆಗಣನೆ

ಯಾದಗಿರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಪುಟದಲ್ಲಿ ಯಾದಗಿರಿ, ರಾಯಚೂರು ಮತ್ತು ಕಲಬುರಿಗ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧಯ ಸಿಕ್ಕಿಲ್ಲ.
ಕಳೆದ ಬಾರಿಯೂ ಈ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲಿಲ್ಲ. ಯಾದಗಿರಿ ಜಿಲ್ಲೆಯಿಂದ ರಾಜೂ ಗೌಡ ಅವರಿಗೆ ಈ ಬಾರಿ ಸಂಪುಟ ಸ್ಥಾನ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಆದರೆ ಅಂತಿಮ ಗಳಿಗೆಯಲ್ಲಿ ಅವರಿಗೆ ಸಚಿವ ಸ್ಥಾನದಿಂದ ಕೈತಪ್ಪಿದೆ. ಅಭಿಮಾನಿಗಳಿಗೆ ಮತ್ತು ಜನರಿಗೆ ನಿರಾಶೆ ಮೂಡಿಸಿದೆ.
ಈ ಬಾರಿ, ದೇವದುರ್ಗದ ಶಿವನಗೌಡ ನಾಯಕ, ಸುರಪುರ ಕ್ಷೇತ್ರದ ರಾಜೂಗೌಡ ಮತ್ತು ಕಲಬುರಗಿ ಗ್ರಾಮೀಣ ಕ್ಷೇತ್ರದ ದತ್ತಾತ್ರೇಯ ಪಾಟೀಲ ರೇವೂರು ಹೆಸರು ಕೇಳಿಬಂದಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಇವರ‍್ಯಾರಿಗೂ ಮಣೆ ಹಾಕಿಲ್ಲ.
ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಲವಾದ ಬೇಡಿಕೆ ಪಕ್ಷದ ಕಾರ್ಯಕರ್ತರ ಹಾಗೂ ನಾಯಕರ ಆಗ್ರಹವಾಗಿತ್ತು. ರಾಜು ಗೌಡ ಹಾಗೂ ದತ್ತಾತ್ರೇಯ ಪಾಟೀಲರ ಹೆಸರುಗಳೂ ತಡ ರಾತ್ರಿಯವರಿಗೆ ಕೇಳಿಬಂದಿದ್ದವು. ಆದರೆ ಕೊನೆಗಳಿಗೆಯಲ್ಲಿ ಅವರನ್ನು ಕೈಬಿಡಲಾಗಿದೆ. ಇದರಿಂದಾಗಿ ಮತ್ತೆ ಈ ಜಿಲ್ಲೆಗಳಿಗೆ ಹೊರಗಿನವರೇ ಉಸ್ತುವಾರಿ ವಹಿಸಿಕೊಳ್ಳುವುದು ಖಚಿತವಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement