ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ : ತಜ್ಞರ ಆತಂಕ

ಬೆಂಗಳೂರು: ಕೊರೋನಾ ಎರಡನೇ ಅಲೆಯ ಕೊನೆಯಲ್ಲಿ ಕಾಡಿರುವ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಈಗಲೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೂರನೇ ಅಲೆಯಲ್ಲಿ ಕೊರೋನಾಗೆ ಹೆಚ್ಚು ಬಾಧಿತರಾಗಲಿರುವ ಮಕ್ಕಳಿಗೂ ಈ ಬ್ಲ್ಯಾಕ್ ಫಂಗಸ್ ಕಾಟ ತಪ್ಪಿದ್ದಲ್ಲ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ಬಾಧಿತರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ. ಒಂದು ವೇಳೆ ಮಕ್ಕಳು ಕೊರೋನಾಗೆ ಹೆಚ್ಚಾಗಿ ಸೋಂಕಿಗೆ ತುತ್ತಾದರೆ ಮಕ್ಕಳಿಗೂ ಬ್ಲ್ಯಾಕ್ ಫಂಗಸ್ ಸಮಸ್ಯೆ ಎದುರಾಗುವ ಸಂಭವ ಇದೆ ಎಂದು ಬೆಂಗಳೂರು ಮಿಂಟೋ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೊರೋನಾ ಮೂರನೇ ಅಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗುವ ಸಾಧ್ಯತೆ ಇದೆ. ಸೋಂಕು ತಗುಲಿ ಅಥವಾ ಇತರೆ ಖಾಯಿಲೆಯಿಂದ ಇಮ್ಯೂನಿಟಿ ಕಡಿಮೆ ಇರುವ ಮಕ್ಕಳಿಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಡಲಿದೆ. ರೋಗ ನಿರೋಧ ಶಕ್ತಿ ಕಳಕೊಂಡ ಮಕ್ಕಳಿಗೆ ೪ ಅಥವಾ ೫ನೇ ವಾರದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಂಭವ ಹೆಚ್ಚಿದೆ ಎಂದು ತಜ್ಷ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ : ಇಂದಿನಿಂದ (ಜು.11) ಸಾಂಪ್ರದಾಯಿಕ ತರಕಾರಿ ಬೀಜ ಮೇಳ-ಮಲೆನಾಡು ಮೇಳ

ಕೊರೋನಾ ಸೋಂಕು ತಗುಲಿ ೬-೭ನೇ ದಿನದಲ್ಲೂ ಕೊರೋನಾ ಸೋಂಕು ಕಡಿಮೆಯಾಗದಿದ್ದರೆ ವೈದ್ಯರು ಸ್ಟಿರಾಯ್ಡ್ ಬಳಸುತ್ತಾರೆ. ಎರಡನೇ ಅಲೆಯಲ್ಲಿ ಸ್ಟಿರಾಯ್ಡ್ ಬಳಸಿದ ಬಳಿಕ ಕೊರೋನಾ ಸೋಂಕು ಸೋಂಕಿತನ ದೇಹದಲ್ಲಿ ತನ್ನ ತೀವ್ರತೆ ಕಡಿಮೆಮಾಡಿದೆ. ಆದರೆ ಇದರಿಂದ ಇತರೆ ಅಡ್ಡಪರಿಣಾಮಗಳಿಗೆ ಸೋಂಕಿತರು ತುತ್ತಾಗಿದ್ದಾರೆ. ಇದೇ ರೀತಿ ಸೋಂಕು ಕಡಿಮೆಯಾಗಲು ಮಕ್ಕಳಿಗೂ ಸ್ಟೀರಾಯ್ಡ್ ಬಳಸಿದ ಬಳಿಕ ಈ ಔಷಧಿಯ ಅಡ್ಡಪರಿಣಾಮಗಳೂ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಕೇವಲ ಬ್ಲ್ಯಾಕ್ ಫಂಗಸ್ ಮಾತ್ರ ಅಲ್ಲವದೇ ಎಂಐಎಸ್ -ಸಿ (ಮಲ್ಟಿಸಿಸ್ಟಮ್ ಇನ್ ಫ್ಲೆಮೆಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್) ಸಮಸ್ಯೆಯೂ ಇದರಿಂದ ಮಕ್ಕಳಲ್ಲಿ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ಕೊರೋನಾ ಚಿಕಿತ್ಸೆಯಿಂದ ಮಕ್ಕಳಲ್ಲಿ ಅಡ್ಡ ಪರಿಣಾಮ ಉಂಟಾಗಲಿದೆ ಎಂದು ಮಕ್ಕಳ ತಜ್ಞ ವೈದ್ಯರು ಹೇಳಿದ್ದು, ಬ್ಲ್ಯಾಕ್ ಫಂಗಸ್ ಬದಲಿಗೆ ಮಕ್ಕಳಲ್ಲಿ ಎಂಐಎಸ್ -ಸಿ ಸಮಸ್ಯೆ ಕಾಣಿಸಿಕೊಂಡರೆ ಮಕ್ಕಳ ದೈಹಿಕ ಬೆಳವಣಿಗೆ ಮೇಲೆ ಪ್ರಭಾವ ಬೀರಲಿದೆ. ಇದಕ್ಕೆ ಪೂರಕವಾದ ಸಂಶೋಧನೆಗಳು ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ. ಮಕ್ಕಳಲ್ಲಿ ಸೋಂಕು ಗುಣಮುಖರಾದ ಬಳಿಕ ಎಂಐಎಸ್ -ಸಿ ಸಮಸ್ಯೆ ಉಂಟಾದರೆ ಮಕ್ಕಳ ದೈಹಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಶಾಲೆಯ ಟಾಯ್ಲೆಟ್ಟಿನಲ್ಲಿ ರಕ್ತದ ಕಲೆ ಕಂಡುಬಂದಿದ್ದಕ್ಕೆ ಮುಟ್ಟಾದ ಹುಡುಗಿಯ ಪತ್ತೆಗೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದರು...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement