13 ವರ್ಷಗಳ ಹೋರಾಟಕ್ಕೆ ಮುಕ್ತಿ ; ಇಹಲೋಕ ತ್ಯಜಿಸಿದ ದೇಶದ ಮೊದಲ ದಯಾ ಮರಣಕ್ಕೆ ಅನುಮತಿ ಪಡೆದಿದ್ದ ಹರೀಶ ರಾಣಾ

ನವದೆಹಲಿ: ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (Vegetative State) ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಹರೀಶ ರಾಣಾ (31), ಮಂಗಳವಾರ (ಮಾರ್ಚ್ 24, 2026) ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತದಲ್ಲಿ ಕಾನೂನುಬದ್ಧವಾಗಿ ‘ದಯಾ ಮರಣ’ಕ್ಕೆ (Passive Euthanasia) ಅನುಮತಿ ಪಡೆದ ಮೊದಲ ವ್ಯಕ್ತಿ ಇವರಾಗಿದ್ದಾರೆ.
2013 ರಲ್ಲಿ, ಆಗ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಅವರು ಪೇಯಿಂಗ್ ಗೆಸ್ಟ್ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದಿದ್ದರು. ಇದರಿಂದಾಗಿ ಮೆದುಳಿಗೆ ಗಂಭೀರ ಹೊಡೆತ ಬಿದ್ದಿತ್ತು. ಮಿದುಳಿನ ಗಾಯದಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದರು. ಜೀವರಕ್ಷಕ ವ್ಯವಸ್ಥೆ ಅಳವಡಿಸಲಾಗಿದ್ದು, ಅವರನ್ನು ಹಾಸಿಗೆಗೆ ಸೀಮಿತಗೊಳಿಸಲಾಗಿತ್ತು. ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಅಳವಡಿಸಲಾಗಿತ್ತು.

ವರ್ಷಗಳು ಕಳೆದಂತೆ ಮತ್ತು ಅವರ ಚೇತರಿಕೆಯ ಭರವಸೆಗಳು ಮಸುಕಾಗುತ್ತಿದ್ದಂತೆ, ಅಅವರು ಚೇತರಿಸಿಕೊಳ್ಳುವ ಯಾವುದೇ ಭರವಸೆ ಇಲ್ಲ ಎಂದು ವೈದ್ಯಕೀಯ ಮಂಡಳಿ ವರದಿ ನೀಡಿತ್ತು.
ವರ ಪೋಷಕರು ಅಂತಿಮವಾಗಿ ನಿಷ್ಕ್ರಿಯ ದಯಾಮರಣಕ್ಕೆ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋದರು. ಮಗನ ಸ್ಥಿತಿಯನ್ನು ನೋಡಲಾರದೆ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಮಾರ್ಚ್ 11ರಂದು ಸುಪ್ರೀಂ ಕೋರ್ಟ್, ಹರೀಶ ರಾಣಾ ಅವರಿಗೆ ದಯಾ ಮರಣಕ್ಕೆ ಅನುಮತಿ ನೀಡಿತು. ವೈದ್ಯಕೀಯ ಮಂಡಳಿಯ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಜೀವ ರಕ್ಷಕ ವ್ಯವಸ್ಥೆಗಳನ್ನು (Life Support) ಹಿಂಪಡೆಯಲು ನ್ಯಾಯಾಲಯ ಸಮ್ಮತಿಸಿತ್ತು.
ಇದರನ್ವಯ, ಮಾರ್ಚ್ 14ರಂದು ಅವರನ್ನು ಏಮ್ಸ್‌ನ ಉಪಶಮನ ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿತ್ತು. ದೀರ್ಘಕಾಲದ ಮೌನ ಮತ್ತು ವೇದನೆಯ ನಂತರ, ಹರೀಶ ಈಗ ಶಾಂತಿಯುತವಾಗಿ ಇಹಲೋಕ ತ್ಯಜಿಸಿದ್ದಾರೆ.

ಪ್ರಮುಖ ಸುದ್ದಿ :-   ತೃಣಮೂಲ ಬಂಡಾಯ ಸಂಸದರನ್ನು ಯಾಕೆ ಆಹ್ವಾನಿಸಿದ್ದೀರಿ ? : ಸರ್ವಪಕ್ಷ ಸಭೆಗೆ ಕೆಲಕಾಲ ಬಹಿಷ್ಕರಿಸಿದ ವಿಪಕ್ಷಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement