ಪರ್ತಗಾಳಿ ವಿದ್ಯಾಧಿರಾಜ ಶ್ರೀಗಳು ಅವತಾರ ಪುರುಷರಾಗಿದ್ದರು, ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯ ಗಂಡಕಿಯಾತ್ರೆ ಮಾಡಿದ್ದರು..

ಕುಮಟಾ; ಗುರುವಾರ ಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಬಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧಿರಾಜ ಶ್ರೀಪಾದ ವಡೇರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಡಿ.ಎಂ.ಕಾಮತ್ ಮಾತನಾಡಿ, ಶ್ರೀಗಳು ಅವತಾರ ಪುರುಷರಾಗಿದ್ದರು. ಭಾರತೀಯ ಧರ್ಮ-ಸಂಸ್ಕೃತಿಯ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಸಮಸ್ಯೆಗಳ ನಿವಾರಣೆ ಮತ್ತು ನಿರ್ಣಯದಲ್ಲಿ ಸಂಸ್ಕೃತ ಗ್ರಂಥಗಳ ಉದಾಹರಣೆಯನ್ನು ಕ್ರಮಬದ್ಧವಾಗಿ ಬಳಸುತ್ತಿದ್ದರು. ಸನಾತನ ಧರ್ಮ ರಕ್ಷಿಸುವಲ್ಲಿ ಪ್ರಮುಖರಾಗಿದ್ದರು ಎಂದರು.
ಮಠಗಳು ಮತ್ತು ದೇವಾಲಯದ ಅಭಿವೃದ್ಧಿಯಲ್ಲಿ ಶ್ರೀಗಳು ಅಪಾರ ಕೋಡುಗೆ ನೀಡಿದ್ದಾರೆ. ಸಾಮಾನ್ಯ ಮನುಷ್ಯರಿಂದ ಸಾಧ್ಯವಿಲ್ಲದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಾಲ್ನಡಿಗೆಯಲ್ಲಿ ೩೭೦ ಕಿಮೀ ನಡೆದು ಅಸಾಧ್ಯವಾದ ಗಂಡಕಿಯಾತ್ರೆ ಮಾಡಿದ್ದರು ಎಂದು ಸ್ವಾಮೀಜಿಗಳ ಬಗ್ಗೆ ಅನೇಕ ವಿಷಯವನ್ನು ತಿಳಿಸಿದರು.
ಕಾರ್ಯದರ್ಶಿ ಸುಧಾಕರ ನಾಯಕ ಮಾತನಾಡಿ, ವಿದ್ಯಾಸಂಸ್ಥೆಗಳ ಅಭಿವೃದ್ಧಿಯಲ್ಲಿ ಸ್ವಾಮೀಜಿಗಳ ಕಳಕಳಿ ಕೊಡುಗೆ ದೊಡ್ಡದು ಎಂದರು.
ನಂತರ ಕೆನರಾ ಕಾಲೇಜು ಸೊಸೈಟಿಯ ಎಲ್ಲ ವಿದ್ಯಾಸಂಸ್ಥೆಗಳ ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮೌನಾಚರಣೆ ನಡೆಸಿ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಪುರುಶೋತ್ತಮ ಹೆಗಡೆಕರ, ಡಾ.ವಿ.ಎಂ.ಪೈ, ಮಹಾವಿದ್ಯಾಲಯದ ವಿವಿಧ ಸಂಸ್ಥೆಗಳ ಪ್ರಾಚಾರ್ಯರಾದ ಡಾ.ಪಿ.ಕೆ.ಭಟ್ಟ ,ಡಾ.ಎಸ್.ವಿ.ಶೇಣ್ವಿ, ಎನ್.ಜಿ.ಹೆಗಡೆ, ವೀಣಾ ಕಾಮತ್, ಡಾ.ಪ್ರೀತಿ ಭಂಡಾರಕರ್ ಮತ್ತಿತರರು ಇದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement