ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಗುರುವಾರ (ಜುಲೈ 7) ಅವರು ಡಾ ಗುರುಪ್ರೀತ್ ಕೌರ್ ಅವರೊಂದಿಗೆ ವಿವಾಹವಾದರು.
ಸಾಂಪ್ರದಾಯಿಕ ಆನಂದ್ ಕರಾಜ್ ಪ್ರಕಾರ, ಸಿಖ್ ಸಂಪ್ರದಾಯಗಳ ಪ್ರಕಾರ ಗುರುದ್ವಾರದಲ್ಲಿ ವಿವಾಹಗಳು ನಡೆದವು. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ವಿವಾಹದಲ್ಲಿ ಪಾಲ್ಗೊಂಡು ದಂಪತಿಯನ್ನು ಆಶೀರ್ವದಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಎಪಿ ಸಂಸದ ರಾಘವ್ ಚಡ್ಡಾ ಅವರು ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. “ನಾನು ನನ್ನ ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದೇನೆ… ಈ ವಿಶೇಷ ಸಂದರ್ಭದಲ್ಲಿ ಮಾನ್ ಸಾಹಬ್ ಮತ್ತು ಅವರ ಕುಟುಂಬವನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಹರಿಯಾಣದ ಕುರುಕ್ಷೇತ್ರದ ಪೆಹೋವಾಗೆ ಸೇರಿದ ಡಾ ಗುರುಪ್ರೀತ್ ಕೌರ್ ಅವರೊಂದಿಗೆ 48 ವರ್ಷದ ಮಾನ್ ಅವರ ವಿವಾಹವಾದರು. ಚಂಡೀಗಡದಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಗುರುಪ್ರೀತ್ ಕೌರ್ (30) ಟ್ವಿಟರ್‌ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಭಗವಂತ್ ಮಾನ್ ಮತ್ತು ಡಾ ಗುರುಪ್ರೀತ್ ಕೌರ್ ಅವರ ಕುಟುಂಬಗಳು ಜುಲೈ 6 ರ ಬುಧವಾರದ ವರೆಗೆ ಅವರ ವಿವಾಹದ ಸುದ್ದಿಯನ್ನು ಸಾರ್ವಜನಿಕವಾಗಿ ಮಾಡಲಿಲ್ಲ. ಅವರ ಮದುವೆ ಸಂಬಂಧೌನ್ನು ಸಹ ಎಚ್ಚರಿಕೆಯಿಂದ ಗೌಪ್ಯವಾಗಿಟ್ಟಿದ್ದರು.
ಭಗವಂತ್ ಮಾನ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಅವರು 2015 ರಲ್ಲಿ ತಮ್ಮ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿದ್ದಾರೆ ಮತ್ತು ಮೊದಲ ಮದುವೆಯಿಂದ ಮಗಳು ಸೀರತ್ ಕೌರ್ (21) ಮತ್ತು ಮಗ ದಿಲ್ಶನ್ (17 ಇಬ್ಬರು ಮಕ್ಕಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ