ಇಂದು ನೀಟ್‌ ಪರೀಕ್ಷೆ ಬರೆಯುವ 16 ಲಕ್ಷ ವಿದ್ಯಾರ್ಥಿಗಳು

ಬೆಂಗಳೂರು : ಕೊರೊನಾ ವೈರಸ್‌ ಸೋಂಕಿನ ನಡುವೆಯೇ 2020-21 ನೇ ಸಾಲಿನ ನೀಟ್ ಪರೀಕ್ಷೆ ಇಂದು (ಸೆಪ್ಟೆಂಬರ್‌ 12ರಂದು )ನಡೆಯಲಿದೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆಯಲಿರುವ ಪರೀಕ್ಷೆಗೆ 16 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳಿಗೆ ನೀಟ್‌ ಪರೀಕ್ಷೆ ನಡೆಯಲಿದ್ದು, ಕರ್ನಾಟಕದ 9 ನಗರಗಳು ಸೇರಿದಂತೆ ದೇಶದ ಒಟ್ಟು 201 ಪ್ರಮುಖ ನಗರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ಬೆಳಗಾವಿ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 180 ಪ್ರಶ್ನೆಗಳಿರಲಿದ್ದು, ಪ್ರತಿ ಪ್ರಶ್ನೆಗೆ 4 ಅಂಕದಂತೆ ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

ನಿಮ್ಮ ಕಾಮೆಂಟ್ ಬರೆಯಿರಿ

advertisement