ಬೆಂಗಳೂರು: ಕಳೆದ ವರ್ಷ ಕೊರೋನಾ ವಿರುದ್ಧ ಹೋರಾಟಕ್ಕೆ 100 ಕೋಟಿ ರೂ. ನೀಡಿದ್ದ ಇನ್ಫೋಸಿಸ್ ಫೌಂಡೇಶನ್ ಕೋವಿಡ್ ಎರಡನೇ ಅಲೆ ವಿರುದ್ಧದ ಹೋರಾಟಕ್ಕೆ ಈಗ ಮತ್ತೆ 100 ಕೋಟಿ ರೂಪಾಯಿ ದೇಣಿಗೆ ನೀಡಲಿದೆ.
. ಕೋವಿಡ್ ನಿಯಂತ್ರಣಕ್ಕೆ ವೆಂಟಿಲೇಟರ್, ಆಮ್ಲಜನಕ ಸಾಂದ್ರಕ ಪೂರೈಕೆ ಹಾಗೂ ಮೂಲಸೌಕರ್ಯ ಬಳಕೆಗೆ 100 ಕೋಟಿ ರೂಪಾಯಿ ಇನ್ಫೋಸಿಸ್ ಹೇಳಿದೆ ಎಂದು ಮನಿ ಕಂಟ್ರೋಲ್.ಕಾಮ್ ವರದಿ ಮಾಡಿದೆ . ಈ ಮೂಲಕ ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಇಸ್ಫೋಸಿಸ್ ಫೌಂಡೇಶನ್ ಒಟ್ಟಾರೆ 200 ಕೋಟಿ ರು. ದೇಣಿಗೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ‘ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೆವು. ಈ ಆಸ್ಪತ್ರೆ ಇದೀಗ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ 100 ಕೋಟಿ ರೂ. ಪೈಕಿ ಶೇ.50ರಷ್ಟುಹಣವನ್ನು ಪಿಎಂ ಕೇರ್ಸ್ಗೆ ನೀಡಿದ್ದೆವು. ಆದರೆ ಈ ಸಲ 100 ಕೋಟಿ ರೂ. ಅನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಇನ್ಫೋಸಿಸ್ ಸಂಸ್ಥೆ ಇರುವ ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಯಲ್ಲೂ ಕೋವಿಡ್ ನಿಯಂತ್ರಣಕ್ಕೆ ಬಳಸಲಿದ್ದೇವೆ ಎಂದು ಇಸ್ಫೋಸಿಸ್ ಫೌಂಡೇಶನ್ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ