ಮುರ್ಡೇಶ್ವರ: ಸಮುದ್ರದ ಅಲೆ ರಭಸಕ್ಕೆ ಮಗುಚಿದ ದೋಣಿ: ಸಹಾಯಕ್ಕೆ ಮೊರೆ, ಮೀನುಗಾರರ ರಕ್ಷಣೆ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಮುರ್ಡೇಶ್ವರದ ಅರಬ್ಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಗಿಲ್ನಟ್ ದೋಣಿ ಮಗುಚಿದ ಕಾರಣ 7 ಮಂದಿ ಮೀನುಗಾರರು ಅಪಾಯದಲ್ಲಿದ್ದ ಘಟನೆ ವರದಿಯಾಗಿದೆ.
ಜನಾರ್ದನ ಹರಿಕಾಂತ ಎಂಬುವವರಿಗೆ ಸೇರಿದ ಜಲಗಂಗಾ ದೋಣಿ ಮುರ್ಡೇಶ್ವರದ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಮಗುಚಿದೆ. ಮೀನುಗಾರರು ತಕ್ಷಣವೇ ಸಮುದ್ರಕ್ಕೆ ಹಾರಿಕೊಂಡು ನಂತರ ಮಗುಚಿದ ದೋಣಿಯ ಮೇಲೆ ಕುಳಿತು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ದೋಣಿಯಲ್ಲಿ 7 ಮೀನುಗಾರರು ಇದ್ದರು ಎಂದು ಹೇಳಲಾಗಿದೆ. ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸುತ್ತಿರುವುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಮತ್ತೊಂದು ಬೋಟ್ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.
ಮುರ್ಡೇಶ್ವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement