ಫೆಬ್ರವರಿಯಲ್ಲಿ 1.49 ಲಕ್ಷ ಕೋಟಿ ದಾಟಿದ ಭಾರತದ ಜಿಎಸ್‌ಟಿ ಸಂಗ್ರಹ : ಮಹಾರಾಷ್ಟ್ರ ಅಗ್ರಸ್ಥಾನದಲ್ಲಿ, ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ಈ ವರ್ಷದ ಫೆಬ್ರವರಿಯಲ್ಲಿ ಭಾರತದ ಒಟ್ಟು ಮಾಸಿಕ ಜಿಎಸ್‌ಟಿ ಆದಾಯವು 1,49,577 ಕೋಟಿ ರೂ.ಗೆ ಏರಿಕೆಯಾಗಿದ್ದು, ಮಹಾರಾಷ್ಟ್ರದಿಂದ ಅತಿ ಹೆಚ್ಚು ಆದಾಯ ಬಂದಿದ್ದು, ಕರ್ನಾಟಕ ಮತ್ತು ಗುಜರಾತ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ದೇಶದ ಒಟ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹಗಳು ಈಗ ಸತತ 12 ತಿಂಗಳುಗಳಿಂದ 1.4 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಹಣಕಾಸು ಸಚಿವಾಲಯದ ಹೇಳಿಕೆಯ ಪ್ರಕಾರ ಇದು ಆರ್ಥಿಕತೆಯ ಉನ್ನತ ಮಟ್ಟದ ಚಟುವಟಿಕೆಯನ್ನು ಪ್ರತಿಬಿಂಬಿಸುತ್ತದೆ.
ಫೆಬ್ರವರಿಯಲ್ಲಿ ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹಗಳು 22,349 ಕೋಟಿ ರೂ.ಗೆ ಏರಿಕೆಯಾಗಿದೆ. ಕರ್ನಾಟಕ 10,809 ಕೋಟಿ ರೂ. ಹಾಗೂ ಗುಜರಾತ್ 9,574 ಕೋಟಿ ರೂ. ಸಂಗ್ರಹಿಸಿದೆ. 8,774 ಕೋಟಿ ಜಿಎಸ್‌ಟಿ ಸಂಗ್ರಹದೊಂದಿಗೆ ತಮಿಳುನಾಡು 4ನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ 5ನೇ ಸ್ಥಾನಕ್ಕೆ (ರೂ. 7,431 ಕೋಟಿ), ಹರಿಯಾಣ 7, 310 ಕೋಟಿ ಕೊಡುಗೆ ನೀಡಿ 6ನೇ ಸ್ಥಾನದಲ್ಲಿದೆ.
ಫೆಬ್ರವರಿ 2023 ರ ದೇಶದ ಒಟ್ಟು GST ಆದಾಯಗಳು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ 12% ಹೆಚ್ಚಾಗಿದೆ, ಸರಕುಗಳ ಆಮದು ಆದಾಯವು 6% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 15% ಹೆಚ್ಚಾಗಿದೆ. ಜಿಎಸ್‌ಟಿ ಜಾರಿಯಾದ ನಂತರ ಈ ತಿಂಗಳು ಗರಿಷ್ಠ 11,931 ಕೋಟಿ ರೂ.ಗಳ ಸೆಸ್ ಸಂಗ್ರಹವಾಗಿದೆ. ಸಾಮಾನ್ಯವಾಗಿ, ಫೆಬ್ರವರಿ 28-ದಿನಗಳ ತಿಂಗಳಾಗಿದ್ದು, ತುಲನಾತ್ಮಕವಾಗಿ ಕಡಿಮೆ ಆದಾಯದ ಸಂಗ್ರಹಣೆಗೆ ಸಾಕ್ಷಿಯಾಗುತ್ತದೆ.

ಪ್ರಮುಖ ಸುದ್ದಿ :-   1950-2015ರ ಅವಧಿಯಲ್ಲಿ ಭಾರತದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 7.8% ಕುಸಿತ ; ಅಲ್ಪಸಂಖ್ಯಾತರ ಶೇಕಡಾವಾರು ಹೆಚ್ಚಳ : ಪಿಎಂ-ಇಎಸಿ ಅಧ್ಯಯನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement