ನವದೆಹಲಿ: ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಎರಡು ಶಿವಸೇನೆ ಬಣಗಳು ಪಕ್ಷದ ಹೆಸರು ಮತ್ತು ಅದರ ಚುನಾವಣಾ ಚಿಹ್ನೆಯನ್ನು ಬಳಸದಂತೆ ಚುನಾವಣಾ ಆಯೋಗ (ಇಸಿಐ) ಶನಿವಾರ ಮಧ್ಯಂತರ ಆದೇಶದಲ್ಲಿ ನಿರ್ಬಂಧಿಸಿದೆ.
ಏಕನಾಥ ಶಿಂಧೆ (ಅರ್ಜಿದಾರ) ನೇತೃತ್ವದ ಬಣ ಮತ್ತು ಉದ್ಧವ್ ಠಾಕ್ರೆ (ಪ್ರತಿವಾದಿ) ನೇತೃತ್ವದ ಮತ್ತೊಂದು ಬಣ ಎರಡಕ್ಕೂ ‘ಶಿವಸೇನಾ’ ಪಕ್ಷದ ಹೆಸರನ್ನು ಹಾಗೂ ಅದರ ಚಿಹ್ನೆ ‘ಬಿಲ್ಲು ಮತ್ತು ಬಾಣ ಬಳಸಲು ಅನುಮತಿ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಎರಡೂ ಪ್ರತಿಸ್ಪರ್ಧಿ ಬಣಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಆದೇಶವನ್ನು ಚುನಾವಣಾ ಆಯೋಗ ನೀಡಿದೆ.
ಉಪಚುನಾವಣೆಯ ದೃಷ್ಟಿಯಿಂದ ಪಕ್ಷದ ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಶಿಂಧೆ ನೇತೃತ್ವದ ಗುಂಪು ಆಯೋಗವನ್ನು ಸಂಪರ್ಕಿಸಿತು.ಗುರುವಾರ, ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಈ ವಿಷಯದ ಕುರಿತು ಆಯೋಗದಿಂದ ಮಾರ್ಗದರ್ಶನ ಕೋರಿದ್ದಾರೆ.
ಚುನಾವಣಾ ಆಯೋಗ ಎರಡೂ ಬಣಗಳಿಗೆ ಮೂರು ಹೆಸರನ್ನು ಸೂಚಿಸಲು ಮತ್ತು ಚಿಹ್ನೆ ಪಟ್ಟಿಯಿಂದ ಚಿಹ್ನೆಗಳನ್ನು ಆಯ್ಕೆ ಮಾಡಲು ಸೂಚಿಸಿದೆ.
ಆಯೋಗವು ಅವರಿಗೆ ಅಕ್ಟೋಬರ್ 10 ಗಡುವು ನೀಡಿದೆ. ಅದಕ್ಕೆ ಅನುಗುಣವಾಗಿ, ಎರಡೂ ಬಣಗಳು ಅಕ್ಟೋಬರ್ 10 ರಂದು ಮಧ್ಯಾಹ್ನ 1:00 ಗಂಟೆಯೊಳಗೆ ಒದಗಿಸುವಂತೆ ನಿರ್ದೇಶಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ