ಮುಂಬೈ: ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಶೇರ್ ಮುಂಬೈನಲ್ಲಿ ಏಳನೇ ದಿನಕ್ಕೆ ಕುಸಿಯಿತು, ಅದರ ಬಿಲಿಯನೇರ್ ಅಧ್ಯಕ್ಷ ಗೌತಮ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ಪರಸ್ಪರ ಬೇರೆ ಬೇರೆಯಾಗುವುದಾಗಿ ಘೋಷಿಸಿದಾಗಿನಿಂದ ಹೂಡಿಕೆದಾರರಲ್ಲಿ ಅನಿಶ್ಚಿತತೆಗೆ ಕಾರಣವಾಗಿ ಶೇರುಗಳ ಬೆಲೆ ಕುಸಿದಿದೆ.
ನವೆಂಬರ್ 13 ರಂದು ಗೌತಮ ಸಿಂಘಾನಿಯಾ ತನ್ನ 32 ವರ್ಷಗಳ ದಾಂಪತ್ಯದ ನಂತರ ಪತ್ನಿ ಮತ್ತು ರೇಮಂಡ್ ಬೋರ್ಡ್ ಸದಸ್ಯರಾದ ನವಾಜ್ ಸಿಂಘಾನಿಯಾ ಅವರಿಂದ ಬೇರೆ ಆಗುವುದಾಗಿ ಘೋಷಿಸಿದಾಗಿನಿಂದ ಶೇರುಗಳ ಬೆಲೆ 12%ರಷ್ಟು ಕುಸಿದಿದೆ, ಇದು ಮಾರುಕಟ್ಟೆ ಮೌಲ್ಯದಲ್ಲಿ $180 ಮಿಲಿಯನ್‌ಗಿಂತಲೂ ಹೆಚ್ಚು ಕರಗಿದೆ. ಶೇರುಗಳು ಬುಧವಾರ 4.4% ನಷ್ಟು ಕುಸಿದವು. ಅಕ್ಟೋಬರ್ 25 ರಿಂದ ದೊಡ್ಡ ಕುಸಿತಕ್ಕೆ ಕಾರಣವಾಗಿದೆ.
ಸಿಂಘಾನಿಯಾ ಅವರ $1.4 ಶತಕೋಟಿ ಸಂಪತ್ತಿನ 75% ನಷ್ಟು ಹಣವನ್ನು ತಮಗೆ ಹಾಗೂ ತಮ್ಮ ಮಕ್ಕಳಾದ ನಿಹಾರಿಕಾ ಹಾಗೂ ನಿಶಾ ಅವರಿಗೆ ನೀಡಬೇಕು ಎಂದು ಪತ್ನಿ ನವಾಜ್ ಮೋದಿ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ರೇಮಂಡ್ ಗ್ರೂಪ್‌ನ ಪ್ರತಿನಿಧಿಯೊಬ್ಬರು ಕಾಮೆಂಟ್‌ಗಾಗಿ ಇಮೇಲ್‌ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.
ಇಬ್ಬರು ದಾಂಪತ್ಯದ ಜೀವನದಿಂದ ಪರಸ್ಪರ ಬೇರೆ ಬೇರೆ ಆಗುವುದರ ಸುತ್ತಲಿನ ಅನಿಶ್ಚಿತತೆಯು ಸ್ಟಾಕ್‌ನ ಮೇಲೆ ಪರಿಣಾಮ ಬೀರುತ್ತಿದೆ. ಇದು ಕಂಪನಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯಾರಿಗೂ ತಿಳಿದಿಲ್ಲ” ಎಂದು ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್‌ನ ವಿಶ್ಲೇಷಕ ವರುಣ್ ಸಿಂಗ್ ಹೇಳಿದ್ದಾರೆ. “ಪತ್ನಿ ಮಂಡಳಿಯ ಸದಸ್ಯರಾಗಿರುವ ಕಾರಣ, ಇದು ಕಾರ್ಪೊರೇಟ್ ಆಡಳಿತದ ಸಮಸ್ಯೆ ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ