
ಭಾರತೀಯ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದ ದೂರವಾದ ವದಂತಿಗಳ ನಡುವೆ ಪಾಂಡ್ಯ ಅವರ ಪತ್ನಿ, ನಟಿ ಮತ್ತು ಮಾಡೆಲ್ ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ದಿಶಾ ಪಟಾನಿಯ ಗೆಳೆಯ ಎಂದು ಹೇಳಲಾಗುತ್ತಿರುವ ನಟ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಕಾಣಿಸಿಕೊಂಡಿದ್ದಾರೆ. ರೆಸ್ಟೋರೆಂಟ್ನಲ್ಲಿ ಇಬ್ಬರು ಭೇಟಿಯಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಊಹಾಪೋಹಕ್ಕೆ ಕಾರಣವಾಗಿದೆ.
ನತಾಶಾ ಮತ್ತು ಅಲೆಕ್ಸ್ ಮುಂಬೈನ ಜನಪ್ರಿಯ ಉಪಾಹಾರ ಗೃಹದಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ವಿಶೇಷವಾಗಿ ನತಾಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಹಬ್ಬಿರುವ ವದಂತಿಗಳ ನಡುವೆ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನಟಾಶಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಿಂದ ಹಾರ್ದಿಕ್ ಅವರ ಎಲ್ಲಾ ಹಳೆಯ ಚಿತ್ರಗಳನ್ನು ತೆಗೆದುಹಾಕಿದ ನಂತರ ಮತ್ತು ಐಪಿಎಲ್ 2024 ಪಂದ್ಯಗಳಿಗೆ ಗೈರುಹಾಜರಾದ ಬೆನ್ನಲ್ಲೇ ನತಾಶಾ ಮತ್ತು ಹಾರ್ದಿಕ್ ಅವರ ದಾಂಪತ್ಯದ ಬಿರುಕುಗಳ ಬಗ್ಗೆ ಊಹಾಪೋಹಗಳು ಎದ್ದಿವೆ.
ಮೇ 2020 ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾದ ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ. ಮಗು ಅಗಸ್ತ್ಯ ಜನಿಸಿದ ನಂತರ 2023 ರಲ್ಲಿ ಇಬ್ಬರೂ ಮತ್ತೆ ವಿವಾಹವಾದರು
ನತಾಶಾ ಸ್ಟಾಂಕೋವಿಕ್ ಅವರು ಬಾಲಿವುಡ್ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಮತ್ತು ಬಿಗ್ ಬಾಸ್ನಲ್ಲಿನ ಅವರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ. ವಿಚ್ಛೇದನದ ವದಂತಿಗಳ ನಡುವೆ ಇಬ್ಬರಿಂದ ಯಾವುದೇ ಹೇಳಿಕೆ ಬಂದಿಲ್ಲ.
ಕೆಲವೇ ದಿನಗಳಲ್ಲಿ, ಹಾರ್ದಿಕ್ ಪಾಂಡ್ಯ ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಮುಂಬರುವ T20 ವಿಶ್ವಕಪ್ನಲ್ಲಿ ಭಾಗವಹಿಸಲಿದ್ದಾರೆ. ಅವರು ಭಾರತೀಯ ಕ್ರಿಕೆಟ್ ತಂಡದ ಉಪನಾಯಕರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ