ರಾಜ್ಯ ವಿಧಾನಸಭೆ ಚುನಾವಣೆ : ಬೆಳಗ್ಗೆ 11:30ರ ವರೆಗೆ ಶೇ 21.94 ಮತದಾನ

ಬೆಂಗಳೂರು: ರಾಜ್ಯ, ಇಂದು ಬುಧವಾರ ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11:30ರ ಸುಮಾರಿಗೆ ರಾಜ್ಯದಲ್ಲಿ ಶೇ 21.94ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಕಡಿಮೆ ಮಾತದಾನವಾಗಿದ್ದರೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮತನದಾನವಾಗಿದೆ.
ಜಿಲ್ಲಾವಾರು ಮಾಹಿತಿ ಇಂತಿದೆ: ಬೆಂಗಳೂರು ಸೆಂಟ್ರಲ್‌ ಶೇ 19.18, ಬೆಂಗಳೂರು ಉತ್ತರ ಶೇ 20.76, ಬೆಂಗಳೂರು ದಕ್ಷಿಣ ಶೇ 19.18, ಬಾಗಲಕೋಟೆ ಶೇ 23.44, ಬೆಂಗಳೂರು ಗ್ರಾಮೀಣ ಶೇ 20.33, ಬೆಂಗಳೂರು ನಗರ ಶೇ 17.22, ಬೆಳಗಾವಿ ಶೇ20.76, ಬಳ್ಳಾರಿ ಶೇ 23.56, ಬೀದರ ಶೇ 20.54,
ವಿಜಯಪುರ ಶೇ 20.66, ಚಾಮರಾಜನಗರ ಶೇ16.77, ಚಿಕ್ಕಮಗಳೂರು 22.29, ಚಿಕ್ಕಬಳ್ಳಾಪುರ ಶೇ 21.46, ಚಿತ್ರದುರ್ಗ ಶೇ 18.56, ದಕ್ಷಿಣ ಕನ್ನಡ ಶೇ28.46, ದಾವಣಗೆರೆ ಶೇ21.32, ಧಾರವಾಡ ಶೇ20.82, ಗದಗ ಶೇ.21.14, ಕಲಬುರ್ಗಿ ಶೇ17.69, ಹಾಸನ ಶೇ22.18, ಹಾವೇರಿ ಶೇ.19, ಕೊಡಗು ಶೇ.26.49, ಕೋಲಾರ ಶೇ19.87, ಕೊಪ್ಪಳ ಶೇ21.46, ಮಂಡ್ಯ ಶೇ19.52, ಮೈಸೂರು ಶೇ19.34, ರಾಯಚೂರು ಶೇ22.48, ರಾಮನಗರ ಶೇ25.21,
ಶಿವಮೊಗ್ಗ ಶೇ22.75, ತುಮಕೂರು ಶೇ22.06, ಉಡುಪಿ ಶೇ30.26, ಉ.ಕನ್ನಡ ಶೇ25.46, ವಿಜಯನಗರ ಶೇ21.07 ಹಾಗೂ ಯಾದಗಿರಿ ಶೇ18.84ರಷ್ಟು ಮತದಾನವಾಗಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ ; ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಇಂದು (ಜೂ.25) ರಜೆ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement