ಬೋಯಿಂಗ್‌ ಇಂಡಿಯಾ-ಸೆಲ್ಕೊದಿಂದ ಕೇವಲ 20 ದಿನಗಳಲ್ಲಿ ಕೋವಿಡ್‌-19 ಆಸ್ಪತ್ರೆ ನಿರ್ಮಾಣ..!

ಬೆಂಗಳೂರು: ಬೋಯಿಂಗ್‌ ಇಂಡಿಯಾ ಹಾಗೂ ಸೆಲ್ಕೊ ಅನುದಾನದಲ್ಲಿ ಬೆಂಗಳೂರಲ್ಲಿ 20 ದಿನಗಳಲ್ಲಿ ಕೋವಿಡ್‌-19 ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ ಯಲಹಂಕದಲ್ಲಿ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದ್ದು ಇದಕ್ಕೆ ಡಾಕ್ಟರ್ಸ್‌ ಫಾರ್‌ ಯು ಫೌಂಡೇಶನ್‌ ಹಾಗೂ ಕರ್ನಾಟಕ ಪವರ್‌ ಕಾರ್ಪೋರೇಶನ್‌ ಲಿಮಿಟೆಡ್‌ ಸಹಯೋಗ ನೀಡಿದೆ.
ಬೋಯಿಂಗ್‌ ಇಂಡಿಯಾ ಹಾಗೂ ಸೆಲ್ಕೊ ಸೋಲಾರ್‌ ಅನುದಾನದ ಈ ಕೋವಿಡ್‌ ಸಪೇಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕೋವಿಡ್‌ ವಿರುದ್ಧದ ನಮ್ಮ ಹೋರಾಟಕ್ಕೆ ಕೈಗಾರಿಕೆಗಳು, ಉದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಈ ಆಸ್ಪತ್ರೆ ಕೆಪಿಸಿಎಲ್‌ ಭೂಮಿಯಲ್ಲಿ ಬೋಯಿಂಗ್‌ ಇಂಡಿಯಾ, ಸೆಲ್ಕೋ ಫೌಂಡೇಶನ್‌ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಅವರಿಗೆ ಹಾಗೂ ಇದಕ್ಕೆ ಸಹಕಾರ ನೀಡಿದ ಡಾಕ್ಟರ್ಸ್‌ ಪಾರ್‌ ಯು ಫೌಡೇಶನ್‌ಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಈ ಆಸ್ಪತ್ರೆಗೆ ಬೋಯಿಂಗ್‌ ಹಾಗೂ ಸೆಲ್ಕೋ ಸೆಲ್ಕೋ ಫೌಂಡೇಶನ್‌ ಅನುದಾನ ನೀಡಿದೆ. ಡಾಕ್ಟರ್ಸ್‌ ಫಾರ್‌ ಯು ಫೌಂಡೇಶನ್‌ ವೈದ್ಯಕೀಯ ಸಿಬ್ಬಂದಿ ಒದಗಿಸಿದೆ ಹಾಗೂ ಸೆಲ್ಕೋ ಫೌಂಡೇಶನ್‌ ಮೂಲಭೂತ ಸೌಕರ್ಯಕ್ಕೆ ಅಗತ್ಯವಾದ ಆದ್ಯತೆ ಘಟಕಗಳನ್ನು ಒದಗಿಸಿದೆ. ಕೆಪಿಸಿಎಲ್‌ ಜಾಗ ನೀಡಿದೆ. ಬೋಯಿಂಗ್‌ ಕಂಪನಿಯು ಕೋವಿಡ್‌-19 ನೆರವಿನ ಭಾಗವಾಗಿ ಏಪ್ರಿಲ್‌ನಲ್ಲಿ ಘೋಷಿಸಿರುವ ಹತ್ತು ಮಿಲಯನ್‌ ನೆರವಿನ ಭಾಗವಾಗಿ ಈ ಆಸ್ಪತ್ರೆ ಕೇವಲ ಇಪ್ಪತ್ತು ದಿನಗಳಲ್ಲಿ ನಿರ್ಮಾಣವಾಗಿದೆ.
ಈ ಆಸ್ಪತ್ರೆಯಲ್ಲಿ 100 ಆಮ್ಲಜನಕಯುಕ್ತ ಬೆಡ್‌ಗಳಿವೆ. 10 ಐಸಿಯು ಹಾಸಿಗೆಗಳಿವೆ, 20 ಹಾಸಿಗೆಗಳು ಹೈ ಡಿಪೆಂಡೆನ್ಸಿ ಯುನಿಟ್‌ಗಳ ವಾರ್ಡಿಗೆ ಮೀಸಲಾಗಿದೆ. ಕೋವಿಡ್‌ ಸಾಂಕ್ರಾಮಿಕಕ್ಕೆ ಇಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಸುತ್ತಮುತ್ತಲಿನ ಆಸ್ಪತ್ರೆಗಳಿಗೂ ಬೆಂಬಲ ನೀಡುವ ಆಸ್ಪತ್ರೆಯಾಗಿ ಇದು ಕಾರ್ಯನಿರ್ವಹಿಸಲಿದೆ. ದಾದಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಾಗೂ ಸಭೆ ಮಾಡುವ ಕೊಠಡಿಗಳಿವೆ. ಅಲ್ಲದೆ ಇದಕ್ಕೆ ಸೋಲಾರ್‌ ವ್ಯವಸ್ಥೆ ಇದೆ. ಇದು ಆರೋಗ್ಯ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವುದಲ್ಲದೆ ಅದನ್ನು ಪ್ರಜಾಪ್ರಭುತ್ವೀಕರಿಸುತ್ತದೆ ಎಂದು ಸೆಲ್ಕೋ ಸಂಸ್ಥಾಪಕ ಹರೀಶ ಹಂದೆ ಹೇಳಿದರು.
ಡಾಕ್ಟರ್ಸ್‌ ಫಾರ್‌ ಯು ತಂಡವು ತಜ್ಞ ಹಾಗೂ ಸಮಾನ್ಯ ವೈದ್ಯರು, ಅರೆವೈದ್ಯರು ಹಾಗೂ ಸೌಲಭ್ಯ ನಿರ್ವಹಣಾ ಸಿಬ್ಬಂದಿ ಒಳಗೊಂಡಿರುತ್ತದೆ. ಬೋಯಿಂಗ್‌ ವತಿಯಿಂದ ವೆಂಟಿಲೇಟರುಗಳು, ಸಿಟಿ ಸ್ಕ್ಯಾನಿಂಗ್‌, ಆಮ್ಲಜನಕ ಸಿಲಿಂಡರುಗಳು ಹಾಗೂ ಸಾಂದ್ರಕಗಳು, ಫ್ಲೋ ಮೀಟರುಗಳು ಹಾಗೂ ಆಸ್ಪತ್ರೆಗೆ ಅಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೋಯಿಂಗ್‌ ಇಂಡಿಯಾ ಅಧ್ಯಕ್ಷ ಸಲೀಲ್‌ ಗುಪ್ತೆ ಅವರು, ಬೋಯಿಂಗ್‌ ಇಂಡಿಯಾವು ಭಾರತದೊಂದಿಗೆ ಐಕ್ಯಮತ್ಯದಲ್ಲಿ ಹಾಗೂ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪರಿಹಾರ ಕಾರ್ಯದ ಭಾಗವಾಗಲು ಸದಾ ಸಿದ್ಧವಿದೆ.ನಮ್ಮ ಪಾಲುದಾರರ ಸಹಯೋಗದೊಂದಿಗೆ ನಮ್ಮ ನಿರಂತರ ಪರಿಹಾರ ಪ್ರಯತ್ನಗಳು ವೈರಸ್ಸಿನಿಂದ ಪ್ರಭಾವಿತರಾದ ಸಮುದಾಯವನ್ನು ತಲುಪುವ ಗುರಿ ಹೊಂದಿದೆ. ಇದರಲ್ಲಿ ತುರ್ತು ಆರೋಗ್ಯ ಸೇವೆ, ವೈದ್ಯಕೀಯ ಸರಬರಾಜು ಸಮುದಾಯ ಮತ್ತು ಪೀಡಿತ ಜನರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಸೇರಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement