ಸಿಆರ್ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋ ಬಿಡುಗಡೆ ಮಾಡಿದ ನಕ್ಸಲರು

ನವ ದೆಹಲಿ : ಏಪ್ರಿಲ್ 3 ರ ಎನ್ಕೌಂಟರ್ ನಂತರ ಅಪಹರಣಕ್ಕೊಳಗಾದ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಫೋಟೋವನ್ನು ಮಾವೋವಾದಿಗಳು ಬಿಡುಗಡೆ ಮಾಡಿದ್ದಾರೆ.
ಏಪ್ರಿಲ್ 3 ರಂದು ಛತ್ತೀಸ್‌ಗಡದ ಬಿಜಾಪುರದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಕ್ಸಲೈಟ್‌ಗಳೊಂದಿಗೆ ಮುಖಾಮುಖಿಯಾಗಿದ್ದರು, ಇದರಲ್ಲಿ 22 ಸೈನಿಕರು ಹುತಾತ್ಮರಾಗಿದ್ದರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಅಪಹರಿಸಿದ್ದರು.
ಕಮಾಂಡೋ ರಾಜೇಶ್ ಸಿಂಗ್ ಮಾನ್ಹಾಸ್ ಚಿತ್ರವನ್ನು ಬುಧವಾರ ನಕ್ಸಲರುಬಿಡುಗಡೆ ಮಾಡಿದ್ದಾರೆ, ಅವರು ಕಳುಹಿಸಿರುವ ಚಿತ್ರದಲ್ಲಿ ರಾಜೇಶ್ ಸಿಂಗ್ ಮಾನ್ಹಾಸ್ ಅವರು ತಾಳೆ ಎಲೆಗಳಿಂದ ಮಾಡಿದ ಗುಡಿಸಲಿನಲ್ಲಿ ಕುಳಿತಿದ್ದು ಕಂಡುಬರುತ್ತದೆ. ರಾಜೇಶ್ ಸಿಂಗ್ ಮನ್ಹಾಸ್ ಅವರ ಚಿತ್ರ ಹೌದು ಎಮಬುದನ್ನು ಸಿಆರ್ಪಿಎಫ್ ಖಚಿತಪಡಿಸಿದೆ. ಇದೇ ಸಂದರ್ಭದಲ್ಲಿ ಮಾವೋವಾದಿಗಳು ತಮ್ಮ ನಾಲ್ವರು ಒಡನಾಡಿಗಳಾದ ಓಡಿ ಸನ್ನಿ, ಪದಮ್ ಲಖಮಾ, ಕೋವಾಸಿ ಬದ್ರು ಮತ್ತು ನುಪಾ ಸುರೇಶ್ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂಬುದನ್ನು ಸಹ ಒಪ್ಪಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement