ಯಾದಗಿರಿ : ಚಂದ್ರಯಾನ-3 ಯಶಸ್ಸಿನ ನೆನಪಿನ ಅಂಗವಾಗಿ ಯಾದಗಿರಿಯಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ವಿಕ್ರಂ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಐತಿಹಾಸಿಕ ಸನ್ನಿವೇಶನದ ನೆನಪಿಗಾಗಿ, ಯಾದಗಿರಿಯಲ್ಲಿ ಎರಡು ಕುಟುಂಬಗಳು ತಮ್ಮ ಮನೆಗಳಲ್ಲಿ ಇತ್ತೀಚೆಗೆ ಜನಿಸಿದ ಎರಡು ಕೂಸುಗಳಿಗೆ ನಾಮಕರಣ ಮಾಡುವ ವೇಳೆ ‘ವಿಕ್ರಮ’ ಹಾಗೂ ‘ಪ್ರಗ್ಯಾನ್’ ಎಂಬ ಹೆಸರನ್ನಿಟ್ಟಿದ್ದಾರೆ.
ವಡಗೇರ ಪಟ್ಟಣದ ಒಂದೇ ಕುಟುಂಬದ ಇಬ್ಬರು ದಂಪತಿ ಮಕ್ಕಳಿಗೆ ವಿಕ್ರಂ ಮತ್ತು ಪ್ರಗ್ಯಾನ್ ಎಂದು ಹೆಸರಿಟ್ಟು ದೇಶಕ್ಕೆ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಒಂದೇ ಕುಟುಂಬದಲ್ಲಿ ಈಚೆಗೆ ಇಬ್ಬರು ಮಕ್ಕಳು ಜನಿಸಿದ್ದರು. ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್ ಎಂದು ಹೆಸರಿಡಲಾಗಿದೆ. ಅಲ್ಲದೇ ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ.
ಒಂದೇ ಕುಟುಂಬದಲ್ಲಿ ಇತ್ತೀಚೆಗೆ ಇಬ್ಬರು ಮಕ್ಕಳು ಜನಿಸಿದ್ದರು. ಬಾಲಪ್ಪ ಹಾಗೂ ನಾಗಮ್ಮ ದಂಪತಿ ಹಾಗೂ ನಿಂಗಪ್ಪ ಹಾಗೂ ಶಿವಮ್ಮ ದಂಪತಿ ಒಂದೇ ಕುಟುಂಬಕ್ಕೆ ಸೇರಿದವರು. ಜುಲೈ 28ರಂದು ಬಾಲಪ್ಪ ಹಾಗೂ ನಾಗಮ್ಮ ದಂಪತಿಗೆ ಗಂಡು ಮಗು ಜನಿಸಿತ್ತು. ಆಗಸ್ಟ್ 18ರಂದು ನಿಂಗಪ್ಪ ಹಾಗೂ ಶಿವಮ್ಮ ದಂಪತಿಗೆ ಹೆಣ್ಣು ಮಗು ಜನಿಸಿತ್ತು.
ಮೊದಲು ಗಂಡು ಮಗುವಿಗೆ ಬೇರೊಂದು ಹೆಸರು, ಹೆಣ್ಣುಮಗುವಿಗೆ ಬೇರೊಂದು ಹೆಸರನ್ನಿಡಲು ನಿರ್ಧರಿಸಲಾಗಿತ್ತು. ಆದರೆ, ಆಗಸ್ಟ್ 23ರಂದು ವಿಕ್ರಂ ಲ್ಯಾಂಡರ್, ಚಂದ್ರನಲ್ಲಿ ಸುರಕ್ಷಿತವಾಗಿ ಇಳಿದ ನಂತರ ಅವರು ತಮ್ಮ ನಿರ್ಧಾರವನ್ನು ಬಲಿಸಿದರು. ಗಂಡು ಮಗುವಿಗೆ ವಿಕ್ರಮ್ ಎಂದೂ ಹೆಣ್ಣು ಮಗುವಿಗೆ ಪ್ರಗ್ಯಾನ್ ಎಂದೂ ನಾಮಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ