ದಯವಿಟ್ಟು ಪಾಕಿಸ್ತಾನದ ಹಿಂದೂಗಳ ಬಗ್ಗೆಯೂ ಮಾತನಾಡಿ : ಇರ್ಫಾನ್ ಪಠಾಣ್ “ಗಾಜಾ” ಪೋಸ್ಟ್‌ ಗೆ ದಾನಿಶ್‌ ಕನೇರಿಯಾ ಮನವಿ

ನವದೆಹಲಿ: ಹಮಾಸ್ ವಿರುದ್ಧ ಗಾಜಾದ ಮೇಲೆ ನಡೆಯುತ್ತಿರುವ ಇಸ್ರೇಲಿ ದಾಳಿಯ ನಡುವೆ ಗಾಜಾದಲ್ಲಿ ಮುಗ್ಧ ಮಕ್ಕಳು ಸಾವಿಗೀಡಾಗುತ್ತಿದ್ದು ಈ ನಿಟ್ಟಿನಲ್ಲಿ ಯುದ್ಧ ತಕ್ಷಣ ಕೊನೆಗಾಣಿಸಲು ವಿಶ್ವ ನಾಯಕರು ಮುಂದಾಗಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮನವಿ ಮಾಡಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇರ್ಫಾನ್‌ ಅವರ ಪೋಸ್ಟ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಾನಿಶ್‌ ಕನೇರಿಯಾ, ಪೋಸ್ಟ್‌ಗೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರನ್ನು ಬೆಂಬಲಿಸಿದ್ದಾರೆ ಹಾಗೂ ಪಾಕಿಸ್ತಾನದ ಹಿಂದೂಗಳ ಪರವಾಗಿಯೂ ಧ್ವನಿ ಎತ್ತಿ ಎಂದು ಮನವಿ ಮಾಡಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಇರ್ಫಾನ್‌ ಪಠಾಣ ಅವರು, ತಮ್ಮ ಅಧಿಕೃತ X ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ್ದಾರೆ, “ಪ್ರತಿದಿನ, ಗಾಜಾದಲ್ಲಿ 0-10 ವರ್ಷ ವಯಸ್ಸಿನ ಮುಗ್ಧ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಮತ್ತು ಜಗತ್ತು ಮೌನವಾಗಿದೆ. ಒಬ್ಬ ಕ್ರೀಡಾಪಟುವಾಗಿ, ನಾನು ಮಾತ್ರ ಮಾತನಾಡಬಲ್ಲೆ. ಆದರೆ ವಿಶ್ವ ನಾಯಕರು ಒಂದಾಗಲು ಮತ್ತು ಈ ಪ್ರಜ್ಞಾಶೂನ್ಯ ಹತ್ಯೆಯನ್ನು ಕೊನೆಗೊಳಿಸಲು ಇದು ಸಕಾಲವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ಮಾಜಿ ಭಾರತೀಯ ಆಟಗಾರನನ್ನು ಶ್ಲಾಘಿಸಿದ ಕನೇರಿಯಾ, ನೀವು ಮಕ್ಕಳ ನೋವನ್ನು ಅರ್ಥಮಾಡಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ ಮತ್ತು ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಆದರೆ ದಯವಿಟ್ಟು ಪಾಕಿಸ್ತಾನಿ ಹಿಂದೂಗಳ ಬಗ್ಗೆಯೂ ಮಾತನಾಡಿ. ಇಲ್ಲಿ ಪಾಕಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ಇರ್ಫಾನ್ ಪಠಾಣ್‌ ಅವರು, ಖಂಡಿತವಾಗಿಯೂ ಸಹೋದರ, ಈ ವಿಷಯದಲ್ಲಿ ನೀವು ನನ್ನೊಂದಿಗೆ ನಿಂತಿರುವುದಕ್ಕೆ ಸಂತೋಷವಿದೆ. ಜಗತ್ತಿನ ಎಲ್ಲ ದುಷ್ಕೃತ್ಯಗಳ ಬಗ್ಗೆ ಮಾತನಾಡೋಣ. ಯಾವ ನಂಬಿಕೆಯಾದರೂ ಸರಿ, ತಪ್ಪು ಕೃತ್ಯಗಳನ್ನು ನಿರ್ಮೂಲನೆ ಮಾಡಬಹುದು ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, “ನಮ್ಮ ಒತ್ತೆಯಾಳುಗಳ ಬಿಡುಗಡೆ” ಒಳಗೊಂಡಿಲ್ಲದ ಹಮಾಸ್ ಭಯೋತ್ಪಾದಕ ಗುಂಪಿನ ವಿರುದ್ಧದ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement